ಅಪಘಾತದಲ್ಲಿ ಮೃತಪಟ್ಟ ಸುಳ್ಯದ ಇಯಾಸ್ ಕನಕಮಜಲು ಅವರ ಮನೆಗೆ ಎಸ್‌ಡಿಪಿಐ ನಾಯಕರ ಭೇಟಿ

0

ಪುತ್ತೂರು: ಕೇರಳದ ಎರ್ನಾಕುಲಂ ಜಿಲ್ಲೆಯ ನೆಡುಂಬಾಶೇರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕನಕಮಜಲು ಸುಣ್ಣಮೂಲೆ ನಿವಾಸಿ ಇಯಾಸ್ ಅವರ ಮನೆಗೆ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಹಾಗೂ ಮಂಗಳೂರು ಗ್ರಾಮಾಂತರ ಜಿಲ್ಲಾ ನಾಯಕರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸಿದರು.


ಸಂತ್ರಸ್ತ ಕುಟುಂಬಕ್ಕೆ ಎಸ್‌ಡಿಪಿಐ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದು ಹೇಳಿದರು. ಅದೇ ರೀತಿ ಯುವಕ ಮೃತಪಟ್ಟ ಸಂದರ್ಭದಲ್ಲಿ ಕೇರಳದ ಎಸ್‌ಡಿಪಿಐ ನಾಯಕರು ಎಲ್ಲಾ ವಿಚಾರದಲ್ಲಿ ಸ್ಪಂದನೆ ನೀಡಿದ ಬಗ್ಗೆ ಕುಟುಂಬಸ್ಥರು ಸ್ಮರಿಸಿದರು. ಮುಂದಿನ ಯಾವುದೇ ಕಾನೂನು ಹೋರಾಟದಲ್ಲಿ SDPI ನಿಮ್ಮೊಂದಿಗೆ ನಿಲ್ಲಲಿದೆ ಎಂಬ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಮಂಗಳೂರು ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್, ಮಂಗಳೂರು ಜಿಲ್ಲಾ ಸಮಿತಿ ಉಪಾದ್ಯಕ್ಷ ಕಲಾಂ ಸುಳ್ಯ, ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಅಲೆಕ್ಕಾಡಿ ಹಾಗೂ ಸುಳ್ಯ ತಾಲೂಕು ಅಧ್ಯಕ್ಷ ಮಿರಾಜ್ ಸುಳ್ಯ ,ಸದಸ್ಯರಾದ ಅಬ್ದುಲ್ಲ ಅಡ್ಕಾರ್ ,ಕಲಂದರ್ ಅರಂಬೂರು ಷರೀಫ್ ನಿಂತಿಕ್ಕಲ್,ಕಭೀರ್ ಅರಂಬೂರು ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here