







ಕಾಣಿಯೂರು: ಶ್ರೀ ಉಳ್ಳಾಕುಲು ಮಹಿಳಾ ಮಂಡಲ ಮರಕ್ಕಡ ಕಲ್ಲಮಾಡ, ಸ್ತ್ರೀಶಕ್ತಿ ಸಂಜೀವಿನಿ ಸಂಘ ಹಾಗೂ ಬಾಲ ವಿಕಾಸ ಸಮಿತಿ ಮರಕ್ಕಡ ಅಂಗನವಾಡಿ ಕೇಂದ್ರ ಇದರ ಸಹಭಾಗಿತ್ವದಲ್ಲಿ
ನ್ಯೂ ವಿಷನ್ ಜನರೇಶನ್ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂದತ್ವ ವಿಭಾಗ ಇವರ ಜಂಟಿ ಆಶ್ರಯದಲ್ಲಿ 2ನೇ ವರ್ಷದ ಕಣ್ಣಿನ ಉಚಿತ ತಪಾಸಣಾ ಶಿಬಿರವು ಅ 25ರಂದು ಮರಕ್ಕಡ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಶ್ರೀ ಉಳ್ಳಾಕುಲು ಮಹಿಳಾ ಮಂಡಲದ ಅಧ್ಯಕ್ಷೆ ಪಾರ್ವತಿ ದಾಮೋದರ ಗೌಡ ಬೊಮ್ಮೊಡಿ ಅವರು ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಿಬಿರವನ್ನು ಆಯೋಜನೆ ಮಾಡುವುದರಿಂದ ಹಳ್ಳಿಯ ಜನರಿಗೆ ಪ್ರಯೋಜನವಾಗಲು ಸಾಧ್ಯ ಎಂದರು. ಕಾರ್ಯಕ್ರಮವನ್ನು ಉದ್ಘಾಟನೆಯನ್ನು ವಂದನಾ ಜಿ ಭಟ್ ನಾರ್ಯ ನೆರವೇರಿಸಿ ಶುಭ ಹಾರೈಸಿದರು.
ಕಣ್ಣಿನ ತಜ್ಞರಾದ ಡಾ| ರಾಮಚಂದ್ರ ಅವರು ಕಣ್ಣಿನ ಆರೋಗ್ಯದ ಬಗ್ಗೆ ಕಣ್ಣಿನ ತಪಾಸನೆ ಬಗ್ಗೆ ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕರಾದ ನಾರಾಯಣ ಗೌಡ ಬೈತಡ್ಕ, ಕಲ್ಲಮಾಡ ಶ್ರೀ ಉಳ್ಳಾಕುಲು ಕ್ಷೇತ್ರದ ಉತ್ಸವ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಮರಕ್ಕಡ ಕಲ್ಲಮಾಡ ಶ್ರೀ ಉಳಾಕುಲು ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಬೈತಡ್ಕ, ಕಾಯಿಮಣ ಕೃಷ್ಣಾಪುರ ಜೋಕಾಲಿ ಬಳಗದ ಅಧ್ಯಕ್ಷ ಜಯಪ್ರಕಾಶ್ ಕಳುವಾಜೆ, ಅಗಳಿ ಶ್ರೀ ಸದಾಶಿವ ಯುವಕ ಮಂಡಲದ ಅಧ್ಯಕ್ಷ ವಿಜಯ ಕುಮಾರ್ ಅಗಳಿ, ಅಗಳಿ ಸದಾಶಿವ ಮಹಿಳಾ ಮಂಡಲದ ಅಧ್ಯಕ್ಷೆ ಸವಿತಾ ಅಗಳಿ, ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಅಗಳಿ, ಕಲ್ಲಮಾಡ ಶ್ರೀ ಉಳ್ಳಾಕುಲು ಕ್ಷೇತ್ರದ ಅನುವಂಶಿಯ ಮೋಕ್ತೆಸರ ಕೇಶವ ಗೌಡ ಸಜಂಕು, ಬಾಲವಿಕಾಸ ಸಮಿತಿ ಅಧ್ಯಕ್ಷೆ ಮೀರಾ ನಾರ್ಯ, ಸಂಜೀವಿನಿ ವಾರ್ಡ್ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಬೈತಡ್ಕ, ಶ್ರೀ ಉಳ್ಳಾಕುಲು ಮಹಿಳಾ ಮಂಡಲದ ಗೌರವಾಧ್ಯಕ್ಷೆ ರೇವತಿ ಮರಕಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಣ್ಣಿನ ತಪಾಸಣಾ ಶಿಬಿರದಲ್ಲಿ 125ಕ್ಕಿಂತ ಹೆಚ್ಚು ಜನರು ಕಣ್ಣಿನ ತಪಾಸಣೆ ನಡೆಸಿ ಪ್ರಯೋಜನ ಪಡೆದುಕೊಂಡರು.ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಮಾಜಿ ಅಧ್ಯಕ್ಷೆ ರೂಪಶ್ರೀ, ಅಂಗನವಾಡಿ ಕೇಂದ್ರದ ನೂತನ ಸಹಾಯಕಿ ಕಾವ್ಯ ರಂಜಿನಿ, ಸಹಕರಿಸಿದ ರೂಪಶ್ರೀ ಗಂಗಾಧರ ಗೌಡ ಬೈತಡ್ಕ, ಜಯಶ್ರೀ ಚಂದ್ರಶೇಖರ ನಾರ್ಯ, ವನಜಾ ಬೈತಡ್ಕ, ಗಿರಿಜಾ ಮೋನಪ್ಪ ಗೌಡ ಬೈತಡ್ಕ, ಮೋಹಿನಿ ನವೀನ ಚಂದ್ರ ನಾರ್ಯ, ಯಶ್ಮಿತಾ ಗಣೇಶ್ ಮರಕ್ಕಡ ಹಾಗೂ ವಂದನ ಜಿ ಭಟ್ ನಾರ್ಯ, ಅಂಗನವಾಡಿ ಕಾರ್ಯಕರ್ತೆ ಸರೋಜಿನಿ, ಚರಿತ ಸಚಿನ್ ಬೈತಡ್ಕ ಇವರನ್ನು ಅಭಿನಂದಿಸಲಾಯಿತು.
ಶರಣ್ಯ ಭಟ್ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಸರೋಜಿನಿ ಸ್ವಾಗತಿಸಿ, ಸುಮಿತ್ರ ವಂದಿಸಿದರು. ಸವಿತಾ ಮರಕ್ಕಡ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ಯಶ್ಮಿತಾ ಮರಕ್ಕಡ, ರೂಪಶ್ರೀ ಬೈತಡ್ಕ, ಜಯಶ್ರೀ ನಾರ್ಯ ಸಹಕರಿಸಿದರು.












