ವಿಟ್ಲ: ಮಟ್ಕ ಆಟದಲ್ಲಿ ತೊಡಗಿದ್ದ ವ್ಯಕ್ತಿಯ ಬಂಧನ

0

ವಿಟ್ಲ: ಮಟ್ಕಾ ಆಟದಲ್ಲಿ ನಿರತರಾಗಿದ್ದ ವ್ಯಕ್ತಿಯನ್ನು ವಿಟ್ಲ ಠಾಣಾ ಪೊಲೀಸರು ಅಡ್ಯನಡ್ಕ ಸಮೀಪ ಬಂಧಿಸಿದ್ದಾರೆ.

ಕೇಪು ಗ್ರಾಮದ ನಿವಾಸಿ ಯಶೋಧರ (42 ವ.) ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣಾ ಎಸ್‌.ಐ. ರಾಮಕೃಷ್ಣ ರವರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ‌ ವ್ಯಕ್ತಿಯಿಂದ ಮಟ್ಕಾ ಆಟಕ್ಕೆ ಬಳಸುವ ಚೀಟಿಗಳು, ನಗದು ಹಣ ಹಾಗೂ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here