ಪುತ್ತೂರು: ನಾಪತ್ತೆಯಾಗಿದ್ದ ವಿದ್ಯಾರ್ಥಿ ಕಾಸರಗೋಡಿನಲ್ಲಿ ಪತ್ತೆ

0

ಪುತ್ತೂರು: ಅ.22ರಂದು ನಾಪತ್ತೆಯಾಗಿದ್ದ ಎಡಮಂಗಲ ಗ್ರಾಮದ ಪೊಯ್ಯತ್ತೂರು ನಿವಾಸಿ ರವಿ ಕುಮಾರ್ ಪೂಜಾರಿ ಅವರ ಪುತ್ರ, ಪುತ್ತೂರು ಕೊಂಬೆಟ್ಟು ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಶ್ರೀವತ್ಸ ಅವರು ಮಂಜೇಶ್ವರ ಹೊಸಂಗಡಿಯ ಹೋಟೆಲೊಂದರಲ್ಲಿ ಪತ್ತೆಯಾಗಿದ್ದಾನೆ.

ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ತಂದೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದರು. ಬೆಳ್ಳಾರೆ ಪೊಲೀಸರು ಹೊಸಂಗಡಿಯಿಂದ ವಿದ್ಯಾರ್ಥಿಯನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here