ಉಜಿರೆ : ಉಜಿರೆ ರತ್ನಮಾನಸ ವಸತಿ ಶಾಲೆಯಲ್ಲಿ ನ.27 ರಂದು ಕೊರಲು ತರುವ ತೆನೆಹಬ್ಬ ಮತ್ತು ಹೊಸಕ್ಕಿ ಊಟ ಕಾರ್ಯಕ್ರಮ ನಡೆಯಿತು.
ಉಜಿರೆ ಶ್ರೀ ಧ. ಮ. ವಸತಿ ಪಿ. ಯು. ಕಾಲೇಜು ಉಪನ್ಯಾಸಕ ಸುನಿಲ್ ಪುರಾಣಿ ಭಾಗವಹಿಸಿ ಹೊಸಕ್ಕಿ ಊಟ ಆಚರಣೆಯ ಮತ್ತು ವಿಶೇಷತೆ ಕುರಿತು ಮಾತನಾಡಿ ಇಂತಹ ಆಚರಣೆ ಮೂಲಕ ಹಿಂದಿನ ಆಚಾರ ವಿಚಾರಗಳ ಕುರಿತು ತಿಳಿಸಿ ಉಳಿಸುವ ಕಾರ್ಯ ಆಗುತ್ತದೆ ಎಂದರು ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಧ. ಮ. ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಮನಮೋಹನ್ ನಾಯಕ್, ಉಜಿರೆ ಸರಕಾರಿ ಆಸ್ಪತ್ರೆಯ ಹಿರಿಯ ಪರಿವಿಕ್ಷಣಾಧಿಕಾರಿ ಸೋಮನಾಥ್, ಸುದ್ದಿ ಬಿಡುಗಡೆ ಪತ್ರಿಕೆಯ ಸಹಾಯಕ ವ್ಯವಸ್ಥಾಪಕ ಜಾರಪ್ಪ ಪೂಜಾರಿ ಬೆಳಾಲು,ಮೈತ್ರಿ ವಸತಿ ನಿಲಯದ ಲಲಿತ ಮುದ್ರಾಡಿ, ಅಜ್ಜರಕಲ್ಲು ಕೃಷಿ ವಿಭಾಗದ ಮೋಹನ್, ಭಾಗವಹಿಸಿದ್ದರು. ರತ್ನ ಮಾನಸ ಜೀವನ ಶಿಕ್ಷಣ ನಿಲಯದ ಪಾಲಕ ಯತೀಶ್ ಬಳಂಜ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಸಿಬ್ಬಂದಿ ರವಿಚಂದ್ರ, ತ್ರಿಭುವನ್ ಉದಯರಾಜ್ ಇನ್ನಿತರು ಸಹಕರಿಸಿದರು. ಬೆಳಿಗ್ಗೆ ಗದ್ದೆಯಿಂದ ಭತ್ತದ ಕೋರಳು ತಂದು ಪೂಜಿಸಲಾಯಿತು ಮಧ್ಯಾಹ್ನ ಹೊಸಕ್ಕಿ ಸಹ ಭೋಜನ ನಡೆಯಿತು