ಕಿರಿಯಾಡಿ ಮಕ್ಕಳ ಭಜನಾ ತಂಡದ ಉದ್ಘಾಟನೆ ಹಾಗೂ ಸಮವಸ್ತ್ರ ವಿತರಣೆ

0

ಉಜಿರೆ : ಇಲ್ಲಿಯ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ, ಕಿರಿಯಾಡಿ ಇದರ ನೇತೃತ್ವದಲ್ಲಿ ನ.27 ರಂದು ಮಕ್ಕಳ ನೂತನ ಭಜನಾ ತಂಡದ ಉದ್ಘಾಟನೆ ಮತ್ತು ಮಕ್ಕಳ ಭಜನಾ ಸಮವಸ್ತ್ರ ವಿತರಣಾ ಕಾರ್ಯಕ್ರಮ ಶ್ರೀ ಸದಾಶಿವ ದೇವಸ್ಥಾದ ವಠಾರದಲ್ಲಿ ನಡೆಯಿತು .

ಮಕ್ಕಳ ಭಜನಾ ತಂಡವನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಶರತ್ ಕೃಷ್ಣ ಪಡುವೆಟ್ನಾಯರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಕ್ಕಳಿಗೆ ಮಕ್ಕಳ ಭಜನಾ ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು. ಭಜನಾ ಮಂಡಳಿಯ ಅಧ್ಯಕ್ಷ ವಿಘ್ನನೇಶ್ ಧರಣಿ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಅರ್ಚಕರು ವಿಷ್ಣುಮೂರ್ತಿ ಹೊಳ್ಳ,ಭಜನಾ ತರಬೇತುದಾರ ಬೆಳ್ತಂಗಡಿ ಭಜನಾ ಪರಿಷತ್ ಕಾರ್ಯದರ್ಶಿ ಜನಾರ್ಧನ, ಭಜನಾ ಮಂಡಳಿಯ ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ ಪದಾಧಿಕಾರಿಗಳು ಮತ್ತು ಸದಸ್ಯರು ಮಾಜಿ ಅಧ್ಯಕ್ಷರುಗಳು, ಸಲಹೆಗಾರರು, ಊರವರು ಉಪಸ್ಥಿತರಿದ್ದರು.ಮಧ್ಯಾಹ್ನ ಮಹಾಪೂಜೆಯ ಮಕ್ಕಳಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು .

LEAVE A REPLY

Please enter your comment!
Please enter your name here