ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ದೇಲಂಪಾಡಿ ಆಯ್ಕೆ

0

ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ದೇಲಂಪಾಡಿಯವರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿದ್ದ ಮಹಾಬಲ ಕಟ್ಟಕ್ಕೋಡಿಯವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆ ಸೆ.19ರಂದು ನಡೆಯಿತು.

ಪ್ರಸಕ್ತ 5 ವರ್ಷದ ಅವಧಿಯ ಆಡಳಿತ ಮಂಡಳಿಗೆ ಆಯ್ಕೆಯಾದ ನಿರ್ದೇಶಕರಲ್ಲಿ ಪಕ್ಷದ ಸೂಚನೆಯಂತೆ ಮೊದಲ ಎರಡೂವರೆ ವರ್ಷ ಮಹಾಬಲ ಕಟ್ಟಕ್ಕೋಡಿ ಹಾಗೂ ಬಳಿಕದ ಎರಡೂವರೆ ವರ್ಷ ರಮೇಶ್ ದೇಲಂಪಾಡಿಯವರು ಅಧ್ಯಕ್ಷರಾಗಿ ಮುಂದುವರಿಯುವಂತೆ ಸೂಚಿಸಲಾಗಿತ್ತು. ಅದರಂತೆ ಎರಡೂವರೆ ವರ್ಷ ಪೂರ್ತಿಗೊಳಿಸಿದ ಮಹಾಬಲ ಕಟ್ಟಕ್ಕೋಡಿಯವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ರಾಜೀನಾಮೆ ಅಂಗೀಕರಗೊಂಡು ಅಧ್ಯಕ್ಷರ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ನಡೆದು ಸೆ.19ರಂದು ದಿನ ನಿಗದಿಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ರಮೇಶ್ ದೇಲಂಪಾಡಿಯವರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾದರು.

ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಶಿವಲಿಂಗಯ್ಯರವರು ರಿಟರ್ನಿಂಗ್ ಅಧಿಕಾರಿಯಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

 

LEAVE A REPLY

Please enter your comment!
Please enter your name here