ಪುತ್ತೂರು: ಹಿರಿಯ ವರ್ತಕ, ತಿಂಗಳಾಡಿ ಮಸ್ಜಿದುಲ್ ಬಾರಿ ಇದರ ಮಾಜಿ ಕಾರ್ಯದರ್ಶಿ ಮೊಯಿದುಕುಟ್ಟಿ ಹಾಜಿ(70.ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಮೇ.13ರಂದು ನಿಧನರಾದರು. ತಿಂಗಳಾಡಿಯಲ್ಲಿ ದಿನಸಿ ಅಂಗಡಿ ಹೊಂದಿದ್ದ ಅವರು ಹಲವಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಾ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಕುಂಞಲಿಮಾ, ಪುತ್ರರಾದ ಬಶೀರ್ ಮುಸ್ಲಿಯಾರ್, ಲತೀಫ್, ಹಮೀದ್, ಮಜೀದ್ ಹಾಗೂ ಕೆಯ್ಯೂರು ಗ್ರಾ.ಪಂ ಸಿಬ್ಬಂದಿ ರಫೀಕ್ ಟಿ.ಎಂ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ನೂರಾರು ಮಂದಿ ಆಗಮಿಸಿದ ಸಂತಾಪ ಸೂಚಿಸಿದರು.