![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ: 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನೆಲ್ಯಾಡಿ ಸಂತಜಾರ್ಜ್ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.98.21 ತೇರ್ಗಡೆ ಫಲಿತಾಂಶ ಬಂದಿದೆ.
ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 56 ವಿದ್ಯಾರ್ಥಿಗಳ ಪೈಕಿ 55 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 98.21 ಫಲಿತಾಂಶ ಬಂದಿದೆ. 13 ವಿದ್ಯಾರ್ಥಿಗಳು ಎ+, 15 ವಿದ್ಯಾರ್ಥಿಗಳು ಎ, 13 ವಿದ್ಯಾರ್ಥಿಗಳು ಬಿ+, 10 ವಿದ್ಯಾರ್ಥಿಗಳು ಬಿ ಹಾಗೂ 5 ವಿದ್ಯಾರ್ಥಿಗಳು ಸಿ+ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಲಕ್ಷ್ಮೀಶ 616, ಶಮಿತ್ ಬಿ.ಎ. 611, ರಕ್ಷಿತಾ ಎನ್ 600, ಶ್ರುತಿ ಎಸ್.ಭಟ್ 592, ಆರ್.ಕಿರಣ್ ಭಾರದ್ವಾಜ್ 589, ಡಿ.ಮೊಹಮ್ಮದ್ ರಿಹಾನ್ 567, ಶರಣ್ ಲಿಯೋ ಪಾಯಸ್ 566, ಶ್ರದ್ಧಾ 535 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.