ಮಾಣಿ-ಮೈಸೂರು ರಾ. ಹೆದ್ದಾರಿಯಲ್ಲಿ ರಸ್ತೆಗೆ ವಾಲಿದ ಭಾರೀ ಗಾತ್ರದ ಮರವನ್ನು ತೆರವುಗೊಳಿಸಿದ ಕುಂಬ್ರದ ಯುವಕರು

0

 


ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಸೇತುವೆಯ ಬಳಿ ರಸ್ತೆಗೆ ವಾಲಿದ್ದ ಭಾರೀ ಗಾತ್ರದ ಮರವನ್ನು ಕುಂಬ್ರದ ಯುವಕರ ತಂಡ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಸಹಾಯದಿಂದ ತೆರವುಗೊಳಿಸಿದ ಘಟನೆ ಜು.11 ರಂದು ನಡೆದಿದೆ.


ಸೇತುವೆಯ ಬಳಿ ಇದ್ದ ಈ ಮರದಲ್ಲಿ ನೇತಾಡುತ್ತಿದ್ದ ಬಳ್ಳಿಯೊಂದು ಘನ ವಾಹನಕ್ಕೆ ಸಿಲುಕಿ ಮರವನ್ನು ಎಳೆದ ಕರಣ ಮರ ಅಪಾಯಕಾರಿಯಾಗಿ ಪರಿಣಮಿಸಿತ್ತು. ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆಯ ಸೂಚನೆಯಂತೆ ಕುಂಬ್ರದ ಸಾಮಾಜಿಕ ಕಾರ್ಯಕರ್ತ ಸಲಾಮುದ್ದೀನ್ ಕುಂಬ್ರ ನೇತೃತ್ವದ ಯುವಕರ ತಂಡ ಮರವನ್ನು ತೆರವುಗೊಳಿಸಿದ್ದಾರೆ. ಮರ ತೆರವು ಕಾರ್ಯಚರಣೆಯ ವೇಳೆ ಸುಮಾರು ಒಂದೂವರೆ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.

ಕಾರ್ಯಾಚರಣೆಯಲ್ಲಿ ಲತೀಫ್ ಕುಂಬ್ರ, ಚೇತನ್ ಕುಂಬ್ರ, ಅರಣ್ಯ ರಕ್ಷಕ ಲಿಂಗರಾಜು, ಮೆಸ್ಕಾಂ ಪವರ್‌ಮ್ಯಾನ್ ಚಂದ್ರಶೇಖರ ಎಸ್, ಬಸಪ್ಪ, ಹಾರಿಸ್ ಕೋಳಿಗದ್ದೆ, ಶರೀಫ್ ಕೊಯಿಲ, ಸಾದಿಕ್ ಮಗಿರೆ, ಹನೀಫ್ ಮಗಿರೆ, ನಿಝಾರ್ ಡಿಂಬ್ರಿ, ಅನ್ಸಾರ್ ಕಡ್ತಿಮಾರ್, ರಾಮಣ್ಣ,ಹನೀಫ್, ಕುಂಬ್ರ ವಲಯ ವಿಖಾಯ ಸದಸ್ಯರಗಳಾದ ಅಶ್ರಫ್ ಸಾರೆಪುಣಿ, ಇಕ್ಬಾಲ್ ಸಾರೆಪುಣಿ, ಆಸಿಫ್ ಸಾರೆಪುಣಿ,ಉಸ್ಮಾನ್ ಸಾರೆಪುಣಿ, ಶರೀಫ್ ಕೋಳಿಗದ್ದೆ, ಅಶ್ರಫ್ ಕೆಜಿಎನ್ ಉಪಸ್ಥಿತರಿದ್ದರು. ಒಳಮೊಗ್ರು ಗ್ರಾಪಂ ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ ಜೆಸಿಬಿ ಯಂತ್ರದ ಮೂಲಕ ಮರವು ತೆರವುಗೊಳಿಸುವಲ್ಲಿ ಸಹಕರಿಸಿದರು. ಸಂಪ್ಯ ಗ್ರಾಮಾಂತರ ಪೊಲೀಸರು ಸಹಕರಿಸಿದರು.

ಅಪಾಯಕಾರಿ ಮರವನ್ನು ತೆರವುಗಳಿಸಿದ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು. ಕೆಲದಿನಗಳ ಹಿಂದೆ ಇದೇ ಯುವಕರ ತಂಡ ರಸ್ತೆ ಬದಿಯ ಅಪಾಯಕಾರಿ ಮರವನ್ನು ತೆರವು ಮಾಡಿದ್ದರು.

LEAVE A REPLY

Please enter your comment!
Please enter your name here