





ಪುತ್ತೂರು:ಸಂಬಂಧಿ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿಗಳೀರ್ವರು ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಕಡಬ ತಾಲೂಕು ಕೊಣಾಜೆ ಗ್ರಾಮದ ಶಿರಾಡಿಯ ಕೊಡಿಂಕಲ್ ನಿವಾಸಿ ಗಣೇಶ್ ಪೂಜಾರಿ ಎಂಬವರ ಪತ್ನಿ ಸಾರಿಕಾ ಅವರಿಗೆ ಹಲ್ಲೆ ನಡೆಸಿದ್ದ ಆರೋಪದಲ್ಲಿ ಬಾಲಕೃಷ್ಣ ಬಾಣಜಾಲು ಮತ್ತು ಗೋಪಾಲ ಪೂಜಾರಿ ಎಂಬವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.ಆರೋಪಿಗಳ ಪರ ವಕೀಲರಾದ ಸಂತೋಷ್ ಕುಮಾರ್ ಉಪ್ಪಿನಂಗಡಿ,ಕು.ಹರ್ಷಿತಾ ವಾದಿಸಿದ್ದರು.











