





4,33,523.57 ರೂ. ನಿವ್ವಳ ಲಾಭ : ಶೇ 15 ಡಿವಿಡೆಂಡ್ : ಲೀ.ಗೆ 0.94 ರೂ ಬೋನಸ್


ಪುತ್ತೂರು: ಕಬಕ ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಆ.20 ರಂದು ಸಂಘದ ಅಧ್ಯಕ್ಷ ರವೀಂದ್ರ ಕೆ ಪೋಳ್ಯ ಇವರ ಅಧ್ಯಕ್ಷತೆ ಯಲ್ಲಿ ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ನ ಅಡ್ಯಾಲುಕರೆ ಕಬಕ ಶಾಖೆಯ ಪಂಚಾಮೃತದಲ್ಲಿ ನಡೆಯಿತು.






ವರದಿ ಸಾಲಿನಲ್ಲಿ ಸಂಘವು 89,84,267 ರೂ. ಗಳ ವ್ಯವಹಾರ ನಡೆಸಿ 4,33,523.57 ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ 15 ಶೇ. ಡಿವಿಡೆಂಡ್ ಹಾಗೂ ಹಾಲು ಹಾಕಿದ ಸದಸ್ಯರಿಗೆ ಲೀಟರಿಗೆ 94 ಪೈಸೆ ಬೋನಸ್ ವಿತರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ವಿಸ್ತರಣಾಧಿಕಾರಿ ಮಾಲತಿ ಪಿ. ಯವರು ಲೆಕ್ಕ ಪರಿಶೋಧನ ವರದಿ ಮಂಡಿಸಿದರು. ಸಂಘ ದ ಸದಸ್ಯೆ ನಳಿನಿ ಪ್ರಾರ್ಥಿಸಿದರು. ಕಾರ್ಯದರ್ಶಿ ಗೀತಾ ಎಸ್. ವರದಿ ವಾಚಿಸಿದರು. ಕಾರ್ಯಕ್ರಮ ನಿರೂಪಿಸಿದ ಮಾಜಿ ಉಪಾಧ್ಯಕ್ಷ ವಿ.ಚಂದ್ರಶೇಖರ ನಾಯ್ಕ್ ಸ್ವಾಗತಿಸಿ ವಂದಿಸಿದರು.
ಉಪಾಧ್ಯಕ್ಷ ವಸಂತ ಗೌಡ ಮುಂಗ್ಲಿಮನೆ, ನಿರ್ದೇಶಕರುಗಳಾದ ಅಬ್ದುಲ್ ಹಮೀದ್ ಕಳಮೆಮಜಲು, ಹೊನ್ನಮ್ಮ ಯಾನೆ ವಿಮಲ, ಶ್ಯಾಮಸುಂದರ ಬಿ. ಜೆ, ಸರಸ್ವತಿ ಎನ್. ದಾಮೋದರ ಗೌಡ, ಲಿಂಗಪ್ಪ ಗೌಡ ಎಂ. ಕುಸುಮ, ಗುಲಾಬಿ, ಹಾಲು ಪರೀಕ್ಷಕಿ ಗೀತಾ ಮತ್ತಿತರರು ವಿವಿಧ ಕಾರ್ಯದಲ್ಲಿ ಸಹಕರಿಸಿದರು.
ನಗದು ಬಹುಮಾನ : ಎಸ್. ಎಸ್.ಎಲ್. ಸಿ. ಹಾಗೂ ಪಿ. ಯು. ಸಿ ಯಲ್ಲಿ 500 ಕ್ಕಿಂತ ಹೆಚ್ಚು ಅಂಕ ಗಳಿಸಿದ 7 ಮಂದಿ ಹೈನುಗಾರರ ಮಕ್ಕಳಿಗೆ ತಲಾ ಒಂದು ಸಾವಿರದಂತೆ ನಗದು ಬಹುಮಾನ ವಿತರಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ ಶಿವರಾಮ ಗೌಡ ಕಳಮೆಮಜಲು ರವರ ಪುತ್ರ ತೇಜಸ್ವಿ (570), ಶೀನಪ್ಪ ಗೌಡ ಹೊಸಳಿಕೆ ಇವರ ಪುತ್ರ ಚೈತನ್ಯ (525), ಮೋಹನ್ ಗುರ್ಜಿನಡ್ಕ ರ ಪುತ್ರಿ ಶ್ರಾವ್ಯ (515), ಚಂದಪ್ಪ ಗೌಡ ಮುಂಗ್ಲಿಮನೆ ಇವರ ಪುತ್ರಿ ಮನಿಶಾ (511), ಪಿ.ಯು. ಸಿ ವಿಜ್ಞಾನ ವಿಭಾಗದಲ್ಲಿ ಹೊನ್ನಪ್ಪ ಗೌಡ ಅಡ್ಯಾಲು ಇವರ ಪುತ್ರ ಕೌಶಿಕ್ (581), ಮೋಹನ ಗೌಡ ಪೋಳ್ಯ ರ ಪುತ್ರ ಹಿತೇಶ್(545), ಶಿವಪ್ಪ ಗೌಡ ಪೋಳ್ಯ ರ ಪುತ್ರ ಅಮಿತ್ (541) ನಗದು ಬಹುಮಾನ ಪಡೆದರು
ಗೌರವಾರ್ಪಣೆ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಲುವಾಗಿ ಸಂಘದ ಸದಸ್ಯರಾಗಿರುವ ನಿವೃತ್ತ ಯೋಧರಾದ ಸತ್ಯನಾರಾಯಣ ಭಟ್ ಬೆಣ್ಣೆಮನೆ, ಶಿವಪ್ಪ ಗೌಡ ಪೋಳ್ಯರವರನ್ನು ಗೌರವಿಸಲಾಯಿತು. ಸಂಘ ಕ್ಕೆ ವರ್ಷ ಪೂರ್ತಿ ಹಾಲು ಪೂರೈಸಿದ ಶಂಕರ ಭಟ್ ವಡ್ಯ,ಹೇಮಂತ್ ಕುಮಾರ್ ಪೋಳ್ಯ, ಅತೀ ಹೆಚ್ಚು ಹಾಲು ಪೂರೈಸಿದ ರೆ| ವಿಜಯ ಹಾರ್ವಿನ್ ಸುದಾನ, ನಾರಾಯಣ ಸಪಲ್ಯ ಕಬಕ, ಭವ್ಯ ಹೊಸಳಿಕೆ, ಸಂಘದ ಕಾರ್ಯಗಳಿಗೆ ಸಹಕರಿಸಿದ ಮಾಜಿ ಉಪಾಧ್ಯಕ್ಷ ವಿ. ಸಿ. ನಾಯ್ಕ್, ಸದಸ್ಯರಾದ ರಮೇಶ್ ಭಟ್ ಮೂಡಕರೆ, ಪ್ರಾಯೋಜಕರಾಗಿ ಸಹಕರಿಸಿದ ಕಬಕ ಹಾರ್ದಿಕ್ ಇಲೆಕ್ಟಾçನಿಕ್ಸ್ ನ ಮಾಲಕ ಈಶ್ವರ ಪೂಜಾರಿ, ಈ ಪವರ್ ಬಿಸಿನೆಸ್ ಸೊಲ್ಯೂಷನ್ನ ಶ್ರೀನಾಥ್ರವರನ್ನು ಗೌರವಿಸಲಾಯಿತು.
ಶೃದ್ಧಾಂಜಲಿ: ಆಡಳಿತ ಮಂಡಳಿ ಯ ಮಾಜಿ ನಿರ್ದೇಶಕರಾಗಿದ್ದ ದೇವಸ್ಯ ಬಾಬು ಗೌಡರ ನಿಧನಕ್ಕೆ ಸಭಾರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ರೈತ ಕಲ್ಯಾಣ ಟ್ರಸ್ಟ್ನಿಂದ ಅನುದಾನ : ನಿಧನರಾದ ಸಂಘದ ಸದಸ್ಯ ಬೈಪದವು ಹೊನ್ನಪ್ಪ ಗೌಡರ ವಾರಿಸುದಾರರಿಗೆ 25 ಸಾವಿರ ಹಾಗೂ ದೇವಸ್ಯ ಬಾಬು ಗೌಡರ ವಾರಿಸುದಾರರಿಗೆ 50 ಸಾವಿರ ಅನುದಾನ ವಿತರಣೆಯಾಗಿದೆ ಎಂದು ಅಧ್ಯಕ್ಷರು ತಿಳಿಸಿದರು
ಪ್ರೋತ್ಸಾಹಕ ಉಡುಗೊರೆ: ಸಂಘಕ್ಕೆ ಹಾಲು ಪೂರೈಸಿದ ಸುಮಾರು 130 ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು


            





