ದರ್ಬೆಯಲ್ಲಿ ಉಷಾ ಸ್ಕ್ಯಾನಿಂಗ್ ಸೆಂಟರ್ ಶುಭಾರಂಭ

0

  •  ಅಲ್ಟ್ರಾಸೌಂಡ್, ಎಕ್ಸರೇ, ಎಕೋ, ಟಿ.ಎಂ.ಟಿ ಸೇವೆಗಳು ಒಂದೇ ಸೂರಿನಡಿಯಲ್ಲಿ

ಪುತ್ತೂರು: ಪುತ್ತೂರಿನ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಕೊಡುಗೆಗಳನ್ನು ನೀಡುತ್ತಿರುವ ದರ್ಬೆಯ ಉಷಾ ಮೆಡಿಕಲ್ಸ್‌ನರಿಂದ ಮತ್ತೊಂದು ಸೇವೆ ಎಂಬಂತೆ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ನೂತನ ತಂತ್ರಜಾನ, ಗುಣಮಟ್ಟದ ಖಾತರಿಯೊಂದಿಗೆ ಸುಸಜ್ಜಿತ ಅಲ್ಟ್ರಾಸೌಂಡ್, ಎಕ್ಸರೇ, ಎಕೋ ಹಾಗೂ ಟಿ.ಎಂ.ಟಿ ಸೇವೆಗಳು ಒಂದೇ ಸೂರಿನಡಿಯಲ್ಲಿ ಸೇವೆ ನೀಡುವ `ಉಷಾ ಸ್ಕ್ಯಾನಿಂಗ್ ಸೆಂಟರ್’ ಆ.೨೫ರಂದು ದರ್ಬೆ ಶ್ರೀರಾಮ ಸೌಧದಲ್ಲಿ ಶುಭಾರಂಭಗೊಂಡಿತು.

ಸ್ಕ್ಯಾನಿಂಗ್ ಸೆಂಟರ್‌ನ್ನು ಉದ್ಘಾಟಿಸಿದ ಹಿರಿಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಮೆಡಿಕಲ್ ಕ್ಷೇತ್ರದಲ್ಲಿ ಬ್ರಾಂಡೆಡ್ ಆಗಿರುವ ಉಷಾ ಮೆಡಿಕಲ್‌ನಿಂದ ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡ ಪಾಲಿಕ್ಲಿನಿಕ್ ಮೂಲಕ ಉತ್ತಮ ಸೇವೆ ಯುವ ವೈದ್ಯರು ಪುತ್ತೂರಿನ ಜನತೆಗೆ ದೊರೆಯುತ್ತಿದೆ. ಇದಕ್ಕೆ ಪೂರಕವಾಗಿಯೇ ಸ್ಕ್ಯಾನಿಂಗ್ ಸೆಂಟರ್ ಪ್ರಾರಂಭಗೊಂಡಿದೆ. ಸ್ಕ್ಯಾನಿಂಗ್ ಸೆಂಟರ್‌ಗಳು ತೆರೆಮರೆಯಲ್ಲಿ ವೈದ್ಯರಿಗೆ ಸಹಕಾರ ನೀಡುತ್ತಾರೆ. ವೈದ್ಯರಿಗಿಂತ ಉತ್ತಮ ಸೇವೆ ನೀಡುವಲ್ಲಿ ರೇಡಿಯಾಲಜಿಸ್ಟ್‌ಗಳು ನೆರವಾಗುತ್ತಾರೆ. ರೇಡಿಯಾಲಸಿಸ್ಟ್‌ಗಳ ಮೂಲಕ ಸ್ಕ್ಯಾನಿಂಗ್ ಸೆಂಟರ್ ಮೂಲಕ ಪುತ್ತೂರಿನ ಜನತೆಗೆ ಇನ್ನಷ್ಟು ಸೇವೆ ದೊರೆಯಲಿದೆ. ರೋಗಗಳನ್ನು ಗುಣಪಡಿಸುವಲ್ಲಿ ವೈದ್ಯರಿಗೂ ಉತ್ತಮ ಸೇವೆ ನೀಡಲು ಸ್ಕ್ಯಾನಿಂಗ್ ಸೆಂಟರ್ ಸಹಕಾರಿಯಾಗಲಿದೆ ಎಂದರು.

ಎಕ್ಸ್‌ರೇ ವಿಭಾಗವನ್ನು ಉದ್ಘಾಟಿಸಿದ ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕರು, ಹಿರಿಯ ಕೀಲು ಮತ್ತು ಎಲುಬು ಶಸ್ತ್ರಚಿಕಿತ್ಸಾ ತಜ್ಞ ಡಾ.ಭಾಸ್ಕರ್ ಎಸ್.ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಬಹುಮುಖ್ಯವಾಗಿದೆ. ವೃತ್ತಿಯಲ್ಲಿ ಪ್ರಾಮಾಣಿಕ ಪ್ರಯತ್ನದ ಮೂಲಕ ಜನರಿಗೆ ವಿಶ್ವಾಸ ಗಳಿಸಲು ಸಾಧ್ಯ. ನೂತನವಾಗಿ ಪ್ರಾರಂಭಗೊಂದ ಉಷಾ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬರಲು ಭಯಪಡುವವರಿಗೆ ಈ ಸ್ಕ್ಯಾನಿಂಗ್ ಸೆಂಟರ್ ಅನುಕೂಲ. ಇಲ್ಲಿ ನುರಿತ ತಜ್ಞ ವೈದ್ಯರ ತಂಡವಿದ್ದು ಇದು ಪುತ್ತೂರಿಗೆ ಮುಕುಟ ಪ್ರಾಯವಾಗಿ ಬೆಳೆಯಲಿ ಎಂದು ಹಾರೈಸಿದರು.

ಆಲ್ಟ್ರಾಸೌಂಡ್ ವಿಭಾಗವನ್ನು ಉದ್ಘಾಟಿಸಿದ ಧನ್ವಂತರಿ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಡಾ.ರವಿಪ್ರಕಾಶ್ ಕಜೆ ಮಾತನಾಡಿ, ವೈದ್ಯರ ಸಮಸ್ಯೆ ಮನಗಂಡು ಎಲ್ಲಾ ಸೌಲಭ್ಯಗಳೊಂದಿಗೆ ಜನತೆ ಉತ್ತಮ ಸೇವೆ ನೀಡಲು ಉಷಾ ಸ್ಕ್ಯಾನಿಂಗ್ ಸೆಂಟರ್ ಮುಂದಾಗಿದೆ. ಇಲ್ಲಿರುವ ಆಲ್ಟ್ರಾಸೌಂಡ್ ಯಂತ್ರವು ಅದ್ಬುತವಾಗಿದೆ. ಇದರಿಂದ ಹಲವು ರೋಗಗಳ ಪತ್ತೆಗೆ ಸಹಕಾರಿಯಾಗಲಿದೆ. ಎಲ್ಲಾಪ್ರಾಕಾರಗಳಿಗೆ ಆಲ್ಟ್ರಾಸೌಂಡ್ ಪ್ರಯೋಜನಕಾರಿ. ಇದರಲ್ಲಿ ಆದಾಯ ದೊಡ್ಡ ಪ್ರಮಾಣದಲ್ಲಿ ಇಲ್ಲವಾದರೂ ಉತ್ತಮ ಸೇವಯು ಸಂಸ್ಥೆಯ ಮೂಲಕ ದೊರೆಯಲಿದೆ. ಉತ್ತಮ ಸೇವೆಯ ಮೂಲಕ ಮುಂದಿನ ದಿನಗಳಲ್ಲಿ ದೊಡ್ಡ ಆಸ್ಪತ್ರೆ ನಡೆಸುವಂತಾಗಲಿ ಎಂದರು.

ಟಿ.ಎಂ.ಟಿ ವಿಭಾಗವನ್ನು ಪ್ರಗತಿ ಆಸ್ಪತ್ರೆಯ ಪ್ರೊಫೆಸರ್ ಆಫ್ ಮೆಡಿಸಿನ್ ಹಿರಿಯ ಹೃದ್ರೋಗ ತಜ್ಞ ಡಾ.ಶ್ರೀಪತಿ ರಾವ್ ಮಾತನಾಡಿ, ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಸೌಲಭ್ಯಗಳ ಮೂಲಕ ರೋಗವನ್ನು ತಡೆಗಟ್ಟಲು ಸಾಧ್ಯವಿದೆ. ಇಲ್ಲಿರುವ ಟಿ.ಎಂ.ಟಿ ವಿಭಾಗದ ಮುಖಾಂತರ ಹೃದಯಾಘಾತ ಆಗುವುದನ್ನು ಪತ್ತೆ ಮಾಡಿ ತಡೆಯಲು ಸಾಧ್ಯವಿದೆ. ಸ್ಕ್ಯಾನಿಂಗ್ ಮೂಲಕ ರೋಗ ಬರುವ ಮೊದಲೇ ತಡೆಯುವ ಜ್ಞಾನ ಪಡೆದುಕೊಂಡು ಸಾವಿನ ಸಂಖ್ಯೆ ಕಡಿಮೆ ಮಾಡಬಹುದು. ಈ ಸಂಸ್ಥೆಯ ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜ್ ಆಗಿ ಮೂಡಿಬರಲು ಎಂದ ಅವರು, ವೈದ್ಯರು ರಾಜಕೀಯ ಕ್ಷೇತ್ರದಲ್ಲಿ ಹೊಂದಿಕೊಳ್ಳುವುದಕ್ಕಿಂತ ವೈದ್ಯಕೀಯ ಕ್ಷೇತ್ರದಲ್ಲಿ ಅಧಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ, ಸಂಸ್ಥೆಯ ಆರಂಭಿಕ ಕೊಡುಗೆಗಳನ್ನು ಬಿಡುಗಡೆ ಮಾಡಿದ ಐ.ಎಂ.ಎ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ಮಾತನಾಡಿ, ಪುತ್ತೂರಿನಲ್ಲಿ ಮೆಡಿಕಲ್ ಮೂಲಕ ಸಣ್ಣ ಉದ್ಯಮ ಪ್ರಾರಂಭಿಸಿ ಉಷಾ ಮೆಡಿಕಲ್ ಸಂಸ್ಥೆಯ ವೈದ್ಯಕೀಯ ಕ್ಷೇತ್ರದಲ್ಲಿ ಆವಶ್ಯಕವಾದ ಹಾಗೂ ಯಾರೂ ಮಾಡದಂತ ಸಾಹಸ ಮಾಡಿದ್ದಾರೆ. ಪಾಲಿಕ್ಲಿನಿಕ್ ಪ್ರಾರಂಭಿಸಿ ನುರಿತ ತಜ್ಞ ವೈದ್ಯರಿಂದ ಸೇವೆ ನೀಡುತ್ತಿದ್ದಾರೆ. ಜನತೆ ಇನ್ನಷ್ಟು ಸೇವೆ ನೀಡುವ ನಿಟ್ಟಿನಲ್ಲಿ ಸ್ಕ್ಯಾನಿಂಗ್ ಸೆಂಟರ್ ಪ್ರಾರಂಭಿಸಿದ್ದು ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳುವಂತಾಗಲಿ ಎಂದರು.

ಡಾ.ರಮಾದೇವಿ. ಡಾ.ಪ್ರಕಾಶ್ ಕುಲಕರ್ಣಿ,ಡಾ.ಅಶೋಕ್ ಪಡಿವಾಳ್, ಡಾ.ವಿಷ್ಣುಪ್ರಸಾದ್, ಡಾ.ಅರವಿಂದ, ಸುಬ್ರಹ್ಮಣ್ಯ ಕೆಮ್ಮಿಂಜೆ, ಡಾ.ವಿಶ್ವನಾಥ ಭಟ್ ಕಾನಾವು, ರಾಜೇಂದ್ರ ಜೈನ್, ಪಾಲುದಾರರಾದ ಡಾ.ಸಂತೋಷ್ ಕೆಮ್ಮಿಂಜೆ, ಡಾ.ರಾಮ್ ಕಿಶೋರ್, ಡಾ.ವಿಶು ಕುಮಾರ್, ಅರುಣಾ ಜಿ.ಭಟ್, ರೂಪಶ್ರೀ ನಾಯಕ್, ಮಾಧವ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಪಾಲುದಾರರಾದ ಉಮೇಶ್ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಭಟ್ ವಂದಿಸಿದರು.

ಒಂದೇ ಸೂರಿನಡಿಯಲ್ಲಿ ಸೇವೆ:
ಮೆಡಿಕಲ್ ಹಾಗೂ ಪಾಲಿಕ್ಲಿನಿಕ್ ಸೇವೆಗಳ ಜೊತೆಗೆ ಇದೀಗ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆಯಾಗಿ `ಉಷಾ ಸ್ಕ್ಯಾನಿಂಗ್ ಸೆಂಟರ್’ ಪ್ರಾರಂಭಿಸಿದ್ದು, ಇದರ ಮೂಲಕ ಜನತೆಗೆ ಕಿಡ್ನಿ, ಲಿವರ್, ಥೈರಾಯಿಡ್, ಮಧುಮೇಹ, ರಕ್ತದೊತ್ತಡ, ಹೃದಯ ಶ್ವಾಸಕೋಶ ತಪಾಸಣೆಗಳಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸ್ಕ್ಯಾನಿಂಗ್, ಎಕ್ಸ್‌ರೇ ಮೊದಲಾದ ತಪಾಸಣೆಗಳಿಗೆ ಜನರು ವಿವಿಧ ಕಡೆಗಳಿಗೆ ಅಲೆದಾಡಬೇಕಾಗಿಲ್ಲ. ನೂತನ ತಂತ್ರಜಾನ, ಗುಣಮಟ್ಟದ ಖಾತರಿಯೊಂದಿಗೆ ಸುಸಜ್ಜಿತ ಅಲ್ಟ್ರಾಸೌಂಡ್, ಎಕ್ಸರೇ, ಎಕೋ ಹಾಗೂ ಟಿ.ಎಂ.ಟಿ ಸೇವೆಗಳು ಉಷಾ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಒಂದೇ ಸೂರಿನಡಿಯಲ್ಲಿ ದೊರೆಯಲಿದೆ.

 

ಶುಭಾರಂಭ ವಿಶೇಷ ಕೊಡುಗೆಗಳು:
ನೂತನ ಸಂಸ್ಥೆಯ ಶುಭಾರಂಭದ ಕೊಡುಗೆಗಳನ್ನು ನೀಡುತ್ತಿದೆ. ಕಂಪ್ಲೀಟ್ ಬ್ಲಡ್ ಕೌಂಟ್(ಸಿಬಿಸಿ), ಫಾಸ್ಟಿಂಗ್ ಬ್ಲಡ್ ಶುಗರ್(ಎಫ್‌ಬಿಸಿ), ಸಿರಂ ಕ್ರಿಯೇಟಿನೈನ್, ಸಿರಂ ಕ್ಯಾಲ್ಸಿಯಂ, ಸಿರಂ ಯೂರಿಕ್ ಆಸಿಡ್, ಲಿಪಿಡ್ ಪ್ರೊಫೈಲ್ ಟೆಸ್ಟ್, ಲಿವರ್ ಫಕ್ಷನ್ ಟೆಸ್ಟ್(ಎಲ್‌ಎಫ್‌ಟಿ), ಯೂರಿನ್ ರೂಟೀನ್, ಥೈರಾಯ್ಡ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್(ಟಿಎಸ್‌ಎಚ್), ಇಸಿಎಚ್‌ಒ/ಟಿಎಂಟಿ, ರಕ್ತದ ಒತ್ತಡ(ಬಿಪಿ), ಚೆಸ್ಟ್ ಎಕ್ಸ್‌ರೇ(ವಿತೌಟ್ ಫಿಲ್ಮ್) ಹಾಗೂ ತಜ್ಞ ವೈದ್ಯರ ಸಲಹೆಗಳಿಗೆ ಸೇರಿದಂತೆ ಒಟ್ಟು ವೆಚ್ಚ ರೂ.೪೫೦೦ ಮೌಲ್ಯದ ತಪಾಸಣೆಯನ್ನು ಶುಭಾರಂಭದ ಕೊಡುಗೆಯಾಗಿ ಕೇವಲ ರೂ.೨೫೦೦ಕ್ಕೆ ಪಡೆಯಲು ಅವಕಾಶವಿದೆ. ಈ ಕೊಡುಗೆಗಳು ಆ.೨೫ರಿಂದ ಸೆ.೫ರ ತನಕ ಮಾತ್ರ ದೊರೆಯಲಿದೆ. ಮುಂಗಡ ಅಪಾಮೆಂಟ್‌ಗಾಗಿ ಮೊಬೈಲ್ ೯೦೦೮೨೫೬೦೦೫ ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here