ಕಡಬ: ಪಿಕಪ್ ವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಕಡಬ ಬಜರಂಗದಳ ಕಾರ್ಯಕರ್ತರು ಜಾನುವಾರು ಹಾಗೂ ಆರೋಪಿಗಳನ್ನು ಕಡಬ ಪೊಲೀಸರಿಗೆ ಒಪ್ಪಿಸಿದ ಘಟನೆ ಆ.31ರಂದು ಬೆಳ್ಳಂಬೆಳಗ್ಗೆ ನಡೆದಿದೆ.
ಏನೆಕಲ್ಲು ಭಾಗದಿಂದ ಕೋಡಿಂಬಾಳದಲ್ಲಿರುವ ಅಕ್ರಮ ಕಸಾಯಿಖಾನೆಯೊಂದಕ್ಕೆ ಕೆ.ಎ.46.6097 ಪಿಕಪ್ ನಲ್ಲಿ ಶಕಿಲ್, ಸುಧೀರ್, ಬೆಳಿಯಪ್ಪ ಎಂಬವರು ನಾಲ್ಕು ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದ್ದು ಖಚಿತ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಕೋಡಿಂಬಾಳ ಸಮೀಪದ ಮುರಚೆಡವು ಎಂಬಲ್ಲಿ ತಡೆ ಹಿಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.