





ಉಪ್ಪಿನಂಗಡಿ: ಪೆರ್ನೆ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ವತಿಯಿಂದ ಪೆರ್ನೆಯ ಶ್ರೀರಾಮಚಂದ್ರ ಪದವಿ ಪೂರ್ವ ವಿದ್ಯಾಲಯಕ್ಕೆ ಕುಡಿಯುವ ನೀರು ಶೇಖರಣೆ ನೀರಿನ ಟ್ಯಾಂಕ್ನ್ನು ಉಚಿತವಾಗಿ ಸೇವಾ ರೂಪದಲ್ಲಿ ಕೊಡುಗೆಯಾಗಿ ಹಸ್ತಾಂತರಿಸಲಾಯಿತು.



ಸಂಘದ ಅಧ್ಯಕ್ಷ ಎಸ್. ತೋಯಜಾಕ್ಷ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಡಿ., ವಿದ್ಯಾಲಯದ ಪ್ರಾಂಶುಪಾಲ ಶೇಖರ ರೈ, ಶಿಕ್ಷಕರಾದ ತಾರನಾಥ ಶೆಟ್ಟಿ, ಚೆನ್ನಕೇಶವ ಹಾಗೂ ಸಿಬ್ಬಂದಿಗಳಾದ ರವೀಂದ್ರ, ಶೀನಪ್ಪ ಉಪಸ್ಥಿತರಿದ್ದರು.













