ಕಾಣಿಯೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುದ್ಮಾರು ಇದರ ವತಿಯಿಂದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ೨೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ೩೧ ರಂದು ನಡೆಯಿತು. ಪುರೋಹಿತರಾದ ನರಸಿಂಹ ಪ್ರಸಾದ್ ಪಾಂಗಣ್ಣಾಯರವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಪಂಚಗವ್ಯ ಪುಣ್ಯಾಹ, ಶ್ರೀ ಗಣಪತಿ ವಿಗ್ರಹದ ಪ್ರತಿಷ್ಠಾಪನೆ, ಗಣಹೋಮ, ಮಂಗಳಾರತಿ, ರಂಗಪೂಜೆ, ಮಹಾಪೂಜೆ. ಅನ್ನಸಂತರ್ಪಣೆ ನಡೆದು, ಬಳಿಕ ಗಣಪತಿ ವಿಗ್ರಹ ವಿಸರ್ಜನೆ ನಡೆಯಿತು. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ, ಕೆಳಗಿನಕೇರಿ ಕೊಪ್ಪ ಶ್ರೀ ಶಾರದಾ ಭಜನಾ ಮಂಡಳಿ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜ್‌ದೀಪಕ್ ಜೈನ್ ಕುದ್ಮಾರುಗುತ್ತು, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ಕುಮಾರು ಕೆಡೆಂಜಿ ಹಾಗೂ ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಚೆನ್ನಪ್ಪ ಗೌಡ ನೂಜಿ, ಜತೆ ಕಾರ್ಯದರ್ಶಿ ಯಶೋಧರ ಕೆಡೆಂಜಿಕಟ್ಟ, ಕೋಶಾಧಿಕಾರಿ ದೇವರಾಜ್ ನೂಜಿ, ಉಪಾಧ್ಯಕ್ಷ ಉಮೇಶ್ ಕೆರೆನಾರು, ಉತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಹೊಸವಕ್ಲು, ಕಾರ್ಯದರ್ಶಿ ರಾಮಚಂದ್ರ ಅನ್ಯಾಡಿ, ಜತೆ ಕಾರ್ಯದರ್ಶಿ ಹರ್ಷಿತ್ ಕೂರ ಹಾಗೂ ಸದಸ್ಯರು ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವೈಭವದ ಶೋಭಾಯಾತ್ರೆ: ಶ್ರಿ ಗಣೇಶನ ಶೋಭಾಯಾತ್ರೆಯು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರದಿಂದ ಹೊರಟು ಕೆಲಂಬೀರಿ, ಚಾಪಳ್ಳ ತನಕ ಸಂಚರಿಸಿ ಮಹಾದ್ವಾರದ ಮೂಲಕ ದೇವಸ್ಥಾನಕ್ಕೆ ಬಂದು ಕುಮಾರಧಾರ ನದಿಯಲ್ಲಿ ವಿಸರ್ಜಿಸಲಾಯಿತು.