ದೆಹಲಿಯನ್ನು ಭ್ರಷ್ಟಾಚಾರ ಮುಕ್ತ ಮಾಡುವುದಾದರೆ ಬೆಂಗಳೂರನ್ನು ಯಾಕೆ ಮಾಡುತ್ತಿಲ್ಲ?
ಬೆಂಗಳೂರು: ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಅಸಮರ್ಪಕ ಆಡಳಿತ ನಿರ್ವಹಣೆ ಕುರಿತು ಉದ್ಯಮಿ ಮೋಹನ್ ದಾಸ್ ಪೈ ಅವರು ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿದ್ದಾರೆ.
ರಾಜ ಕಾಲುವೆಗಳು ಹೂಳಿನಿಂದ ತುಂಬಿವೆ.ಎಲ್ಲಾ ಕಡೆ ಕಸ, ಅವಶೇಷಗಳು ಬಿದ್ದಿವೆ.ಮುಖ್ಯವಾದ ಯೋಜನೆಗಳನ್ನು ಪರಿಶೀಲಿಸಿ ಬೆಂಗಳೂರು ಉಳಿಸಿ ಎಂದು ಪ್ರಧಾನಿಗೆ ಟ್ವೀಟ್ ಮೂಲಕ ಪೈಯವರು ಮನವಿ ಮಾಡಿದ್ದಾರೆ.
ಸ್ಥಳೀಯ ಸರ್ಕಾರ ಸಮಸ್ಯೆ ಬಗೆಹರಿಸುವಲ್ಲಿ ವಿ-ಲವಾದಾಗ ಪ್ರಧಾನಿ ನರೇಂದ್ರ ಮೋದಿ ಕೊನೆಯ ಭರವಸೆ.ಏಕೆಂದರೆ ಆಡಳಿತ ಸುಧಾರಿಸಬೇಕಾಗಿದೆ, ನಮ್ಮ ನಗರಕ್ಕೆ ಉತ್ತಮ ಕಾನೂನುಗಳು, ಉತ್ತಮ ಹೊಣೆಗಾರಿಕೆಯ ಅಗತ್ಯವಿದೆ ಎಂದಿದ್ದಾರೆ.
ದೆಹಲಿಯನ್ನು ಭ್ರಷ್ಟಾಚಾರ ಮುಕ್ತ ಮಾಡುವುದಾದರೆ ಬೆಂಗಳೂರನ್ನು ಯಾಕೆ ಮಾಡುತ್ತಿಲ್ಲ ಎಂದು ಮೋಹನ್‌ದಾಸ್ ಪೈಯವರು ಪ್ರಶ್ನಿಸಿದ್ದು,ಪ್ರಧಾನಿ ಮೋದಿಯವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಲ್ ಸಂತೋಷ್ ಅವರಿಗೂ ಪೈಯವರು ಟ್ವೀಟ್ ಮಾಡಿದ್ದಾರೆ.