ಪುತ್ತೂರು: ಸಮಾಜ ಸೇವಾ ಘಟಕವಾಗಿರುವ ಇ ಫೌಂಡೇಶನ್ ಇಂಡಿಯಾ ಪುತ್ತೂರು ಇದರ 2022-2023 ನೇ ಸಾಲಿನ ನೂತನ ಅಧ್ಯಕ್ಷರಾಗಿ ಆರಿಫ್ ಸಾಲ್ಮರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಕೂರ್ನಡ್ಕ ಆಯ್ಕೆಯಾಗಿದ್ದಾರೆ. ಕಾರುಣ್ಯ ಕಚೇರಿಯಲ್ಲಿ ನಡೆದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ಶಾಕೀರ್ ಪುತ್ತೂರು, ಜೊತೆ ಕಾರ್ಯದರ್ಶಿಯಾಗಿ ಇಜಾಝ್ ಪಡೀಲ್, ಆಸೀಫ್ ಅಜ್ಜಿಕಟ್ಟೆ, ಖಜಾಂಜಿಯಾಗಿ ಹೈದರ್ ಚಾಯ್ಸ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಝೀಝ್ ಗೋಳಿಕಟ್ಟೆ, ಶುಕೂರ್ ಪುತ್ತೂರು, ಇಮ್ತಿಯಾಝ್ ಪಾರ್ಲೆ, ಸಮೀರ್ ಬಿಗ್ಮಿಶ್ರ, ಮುಝಮ್ಮಿಲ್ ಚಾಯ್ಸ್, ರಿಯಾಜ್ ಝರಾ ಹಾಗೂ ಆಸೀಫ್ ಐಡಿಯಾರವರು ಆಯ್ಕೆಯಾಗಿದ್ದಾರೆ.