





ಕಡಬ: ಕಡಬ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಕುಟ್ರಪಾಡಿ ಗ್ರಾಮದಲ್ಲಿ `ಯೂತ್ ಜೋಡೊ ಬೂತ್ ಜೋಡೊ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.








ಈ ಸಂದರ್ಭದಲ್ಲಿ `ಭಾರತ್ ಜೋಡೊ’ ಯಾತ್ರೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈಝಲ್ ಎಸ್.ಇ.ಎಸ್, ಜಿ.ಪಂ ಮಾಜಿ ಸದಸ್ಯ ಪಿ.ಪಿ ವರ್ಗೀಸ್, ಬ್ಲಾಕ್ ಪ್ರ.ಕಾರ್ಯದರ್ಶಿ ಸತೀಶ್, ಗ್ರಾ.ಪಂ ಸದಸ ಸುಧೀರ್ ದೇವಾಡಿಗ, ಮಾಜಿ ಅಧ್ಯಕ್ಷ ಯೂಸುಫ್, ಮಾಜಿ ಸದಸ್ಯ ತನಿಯಪ್ಪ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.










