ರಾಷ್ಟ್ರಿಯ ವೈದ್ಯಕೀಯ ಪ್ರವೇಶ ಪರೀಕ್ಷೆ-ನೀಟ್ 2022; ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

0

ಪುತ್ತೂರು: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿಕೇಂದ್ರ ಸರಕಾರವು ನಡೆಸಿದ 2022ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವಕಾಲೇಜಿನವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಮನ್ವಿತಎನ್‌ಪಿ(ಕಾಸರಗೋಡಿನ ನೀರ್ಚಾಲಿನ ಪುರುಷೋತ್ತಮ ಶರ್ಮ ಮತ್ತು ಸುಮಾದಂಪತಿ ಪುತ್ರಿ)ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 553 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 46928ನೇ ರ್‍ಯಾಂಕ್, ಕೆಟಗರಿ ವಿಭಾಗದಲ್ಲಿ 18052 ನೇ ರ್‍ಯಾಂಕ್ ಗಳಿಸಿದ್ದಾರೆ.ಈಕೆ 2021-22 ನೇ ಶೈಕ್ಷಣಿಕವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿರಾಜ್ಯದಲ್ಲಿನಾಲ್ಕನೇ ರ್‍ಯಾಂಕ್‌ ಪಡೆದಿದ್ದರು.
ವಿನೀತ್‌ಜೆ(ಪುತ್ತೂರಿನ ಜಯಂತ ಮತ್ತು ಸರೋಜಿನಿ ಎನ್‌ದಂಪತಿ ಪುತ್ರ)548 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 50369ನೇ ರ್‍ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 22407 ನೇ ರ್‍ಯಾಂಕ್, ಸಾತ್ವಿಕ್ ಶಿವಾನಂದ್ (ಸುಳ್ಯದ ಶ್ರೀರಾಮ ಪಿ ಸಿ ಮತ್ತು ಶಿಲ್ಪಾ ಪಿ. ಎಸ್‌ದಂಪತಿ ಪುತ್ರ) 528 ಅಂಕಗಳನ್ನು ಪಡೆದುಅಖಿಲ ಭಾರತ ಮಟ್ಟದಲ್ಲಿ 63498ನೇ ರ್‍ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 23754 ನೇ ರ್‍ಯಾಂಕ್, ಶ್ರೀನಿಧಿ ಐ(ಕಾಸರಗೊಡಿನ ಪೆರ್ಲದ ಹರೀಶ್ ಐ ಮತ್ತು ಜಯಪ್ರದ ಕೆ ದಂಪತಿ ಪುತ್ರ) 509 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 77394ನೇ ರ್‍ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 28466 ನೇ ರ್‍ಯಾಂಕ್, ಸ್ತುತಿ ಎಂ. ಎಸ್(ಪುತ್ತೂರಿನ ನೆಹರೂನಗರದ ಶ್ರೀಕೃಷ್ಣ ಗಣರಾಜ್ ಭಟ್ ಮತ್ತು ಸೌಮ್ಯ ಎಂ ದಂಪತಿ ಪುತ್ರಿ)488 ಅಂಕಗಳನ್ನು ಪಡೆದುಅಖಿಲ ಭಾರತ ಮಟ್ಟದಲ್ಲಿ93373ನೇ ರ್‍ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 33632 ನೇ ರ್‍ಯಾಂಕ್, ಶ್ರೇಯಸ್‌ ಕಮಲ್ 454 ಅಂಕಗಳನ್ನು ಪಡೆದುಕೆಟಗರಿ ವಿಭಾಗದಲ್ಲಿ 40040 ನೇ ರ್‍ಯಾಂಕ್, ಕೆ. ಎ. ಅನನ್ಯ 430 ಅಂಕಗಳನ್ನು ಪಡೆದುಕೆಟಗರಿ ವಿಭಾಗದಲ್ಲಿ 50078 ನೇ ರ್‍ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತುಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here