ಸೆ.9: ಸಂಪ್ಯದ ಆದರ್ಶ ಟೈಲ್ಸ್ & ಗ್ರ್ಯಾನೈಟ್ ಸಂಸ್ಥೆಯಲ್ಲಿ ಲಕ್ಕಿ ಸ್ಕೀಂನ ಉದ್ಘಾಟನೆ

0

ಪುತ್ತೂರು: ಮಾಣಿ – ಮೈಸೂರು ಹೆದ್ದಾರಿಯ ಸಂಪ್ಯದ ಫಾದಿಲ್ ಕಾಂಪ್ಲೆಕ್ಸ್ ನಲ್ಲಿರುವ ಆದರ್ಶ ಟೈಲ್ಸ್ & ಗ್ರ್ಯಾನೈಟ್ ಸಂಸ್ಥೆಯಲ್ಲಿ ಬಡವರ ಬಾಳಿಗೆ ಆದರ್ಶ ಬೆಳಕು ಆದರ್ಶ ಲಕ್ಕಿ ಸ್ಕೀಂನ ಉದ್ಘಾಟನಾ ಸಮಾರಂಭ ಸೆ.9ರಂದು ಬೆಳಗ್ಗೆ ನಡೆಯಲಿದೆ.

ಅಕ್ಷಯ ಕಾಲೇಜಿನ ಸಂಚಾಲಕರಾದ ಜಯಂತ ನಡುಬೈಲ್ ರವರು ಲಕ್ಕಿ ಸ್ಕೀಂನ ಕಾರ್ಡ್ ಅನಾವರಣ ಮಾಡಲಿದ್ದಾರೆ. ಪುತ್ತೂರು ಪದ್ಮಶ್ರೀ ಸೋಲಾರ್ ಸಿಸ್ಟಂ ನ ಮಾಲಕರಾದ ಸೀತಾರಾಮ ರೈ ಕೆಂದಂಬಾಡಿ ಗುತ್ತು, ಆರ್ಯಾಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್, ಸಂಪ್ಯ ಜುಮಾಮಸೀದಿಯ ಅಧ್ಯಕ್ಷರಾದ ಎಸ್.ಅಬ್ದುಲ್ ಜಲೀಲ್ ಹಾಜಿ, ಪೆರ್ನೆ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ಶೇಖರ ರೈ ಕೆ., ಉದ್ಯಮಿಗಳಾದ ಶಮೀರ್ ಪರ್ಲಡ್ಕ, ನಿಸಾರ್ ಸಂಪ್ಯ, ಬೊಳುವಾರಿನ ಅಂಬಿಯಾ ಆಟೋಲಿಂಕ್ಸ್ ನ ಮಾಲಕ ಯಾಕುಬ್ ಮೊದಲಾದವರು ಭಾಗವಹಿಸಲಿದ್ದಾರೆ. ಲಕ್ಕಿ ಸ್ಕೀಂನ ಸದಸ್ಯರು ಪ್ರತೀ ವಾರ ೫೦೦ ರೂಪಾಯಿಯಂತೆ 10  ತಿಂಗಳು ಪಾವತಿಸಬೇಕಾಗಿದೆ. ಪ್ರತಿ ತಿಂಗಳ ೧ ಹಾಗೂ ೧೫ರಂದು ಡ್ರಾ ನಡೆಯಲಿದ್ದು ಬೆಳೆಬಾಳುವ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7338027329 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here