ಉಪ್ಪಿನಂಗಡಿ: ಪೆರಿಯಡ್ಕ, ಉಪ್ಪಿನಂಗಡಿ ಪರಿಸರದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ‍್ಯಾಚರಿಸುತ್ತಿರುವ ಬಾಂಬೆ ಸೆಲೂನ್ ಇದರ 4ನೇ ಸಹಸಂಸ್ಥೆ ಗಂಡಿಬಾಗಿಲುನಲ್ಲಿ
ಸೆ. 12ರಂದು ಶುಭಾರಂಭಗೊಂಡಿತು.
ನೂತನ ಶಾಪ್‌ನ್ನು ಕರ‍್ವೇಲ್ ಜುಮಾ ಮಸೀದಿಯ ಖತೀಬ್ ಸೆಯ್ಯದ್ ಅನಸ್ ತಂಙಳ್ ಉದ್ಘಾಟಿಸಿ, ದುವಾಃ ನೆರವೇರಿಸಿ ಮಾತನಾಡಿ ಗಂಡಿಬಾಗಿಲು ಪರಿಸರ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದ್ದು, ಈ ಪರಿಸರದ ಜನರ ಅಗತ್ಯತೆಗೆ ಅನುಗುಣವಾಗಿ ಸೆಲೂನ್ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಸೌಕತ್ ಅಲಿ ಫೈರಿh ಮಾತನಾಡಿ ಸಂಸ್ಥೆ ಅಭಿವೃದ್ಧಿಯತ್ತ ಸಾಗಲಿ ಎಂದರು.
ಸಮಾರಂಭದಲ್ಲಿ ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸ ಸಮಿತಿಯ ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಫೈಝಿ, ಯೂಸುಫ್ ಖಾಸಿಮಿ, ಇಬ್ರಾಹಿಂ ಮುಸ್ಲಿಯಾರ್, ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಸದಸ್ಯ ನಝೀರ್ ಪೂರಿಂಗ, ಕುತುಬಿಯಾ ಜುಮಾ ಮಸೀದಿ ಸಮಿತಿ ಕಾರ‍್ಯದರ್ಶಿ ಎಸ್. ಆದಂ ಹಾಜಿ, ಜೊತೆ ಕಾರ‍್ಯದರ್ಶಿ ಅಬ್ದುಲ್ ರಜಾಕ್ ಮರ‍್ವೇಲ್, ಸ್ಥಳೀಯ ಪ್ರಮುಖರಾದ ಎಲ್ಯಣ್ಣ ಪೂಜಾರಿ, ಪುನೀತ್ ಬಜತ್ತೂರು, ಸಂತೋಷ್ ಕುಮಾರ್, ಎನ್.ಎ. ಇಸಾಕ್, ಇಸ್ಮಾಯಿಲ್ ಜಿ., ಎಸ್.ಪಿ. ಖಲಂದರ್, ಇಸಾಕ್ ಬೊಳುಂಬುಡ, ಝಿಯಾದ್, ಹಾರಿಸ್ ಗಂಡಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಜಿ. ಮಹಮ್ಮದ್ ರಫೀಕ್ ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿ, ಸೆಲೂನ್ ನಿರ್ವಾಹಕ ರಿಯಾಝ್ ವಂದಿಸಿದರು. ರಾಹಿಲ್, ನಝೀರ್ ಕೊಲ ಕಾರ‍್ಯಕ್ರಮ ನಿರೂಪಿಸಿದರು.