





ಸಾಂಸ್ಕೃತಿಕ ಬದುಕು ಒತ್ತಡವನ್ನು ನಿವಾರಿಸಬಲ್ಲದು – ಪ್ರೊ. ವಿಷ್ಣು ಗಣಪತಿ ಭಟ್


ಪುತ್ತೂರು: ಕೇವಲ ಓದು ಮಾತ್ರ ಜೀವನಕ್ಕೆ ಸಾಲದು. ವಿದ್ಯಾರ್ಥಿಗಳು ಸಾಂಸ್ಕೃತಿಕ ಬದುಕು, ನೈತಿಕ ಶಿಕ್ಷಣ, ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ಇವು ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯವನ್ನು ಬೆಳೆಸುತ್ತದೆ, ಮಾತ್ರವಲ್ಲದೆ ಜೀವನದಲ್ಲಿ ಮುಂದೊಂದು ದಿನ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ ಎಂದು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) , ಪುತ್ತೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ವಿಷ್ಣು ಗಣಪತಿ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.






ವಿವೇಕಾನಂದ ಪದವಿಪೂರ್ವ ಕಾಲೇಜಿನ ವೀರರಾಣಿ ಅಬ್ಬಕ್ಕ ಸಭಾವೇದಿಕೆಯಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವದ ಮೊದಲನೇ ದಿನ ʼಸಾಧನಾ ದರ್ಪಣಂʼ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಜೀವನವು ನಮ್ಮದು ಹಾಗೂ ಅದನ್ನು ರೂಪಿಸಿಕೊಳ್ಳಬೇಕಾದದ್ದೂ ನಾವೇ. ವಿದ್ಯಾರ್ಥಿಗಳಾದವರು ಜ್ಞಾನ-ವಿಜ್ಞಾನ ಎರಡನ್ನೂ ಮೇಳೈಸಿಕೊಂಡು ಹೋಗಬೇಕು. ಒಂದು ಶಿಕ್ಷಣ ಸಂಸ್ಥೆಯ ನಾಲ್ಕು ಪ್ರಮುಖ ಆಧಾರ ಸ್ತಂಭಗಳೆಂದರೆ ಮಕ್ಕಳು, ಹೆತ್ತವರು, ಅಧ್ಯಾಪಕರು ಹಾಗೂ ಆಡಳಿತಮಂಡಳಿ. ಇವು ಸಮತೋಲನದಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಂಸ್ಥೆಯು ಶ್ರೇಯೋಭಿವೃದ್ಧಿಯನ್ನು ಕಾಣಲು ಸಾಧ್ಯ. ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಲೆಕ್ಕ ಪರಿಶೋಧಕರಾದ ಸಿ.ಎ ದೀಪ್ಷಿಕ್. ಕೆ ಮಾತನಾಡುತ್ತಾ, ಆಧುನಿಕ ಯುಗದಲ್ಲಿ ಡಿಜಿಟಲ್ ಪ್ರಪಂಚದ ಬೆಳವಣಿಗೆಯಿಂದಾಗಿ ವಿದ್ಯಾರ್ಥಿಗಳಿಗೆ ಹಲವು ಪ್ರಯೋಜನಗಳಿವೆ. ವಿಪರ್ಯಾಸವೇನೆಂದರೆ ಇಂದು ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳ ದಾಸರಾಗಿದ್ದಾರೆ. ಯಾವುದೇ ತಂತ್ರಜ್ಞಾನಗಳು ಮಾನವ ಲೋಕಕ್ಕೆ ವರದಾನವಾಗಬೇಕೇ ಹೊರತು ಅದರ ದುರ್ಬಳಕೆ ಸಲ್ಲದು. ವಿದ್ಯಾರ್ಥಿಗಳು ತಂತ್ರಜ್ಞಾನಗಳ ಸದ್ಬಳಕೆಯನ್ನು ಮಾಡಿಕೊಂಡಲ್ಲಿ ಜೀವನದಲ್ಲಿ ಸಫಲತೆಯನ್ನು ಕಾಣಬಹುದು ಎಂದು ಕಿವಿಮಾತನ್ನು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಮಂಡಳಿಯ ನಿರ್ದೇಶಕರಾದ ಡಾ ಕೆ.ಎನ್ ಸುಬ್ರಹ್ಮಣ್ಯ ವಹಿಸಿಕೊಂಡು ಸ್ಪರ್ಧಾತ್ಮಕ ಬೆಳವಣಿಗೆಗೆ ಹಾಗೂ ಸೃಜನಾತ್ಮಕ ಮನೋಭಾವವನ್ನು ಬೆಳೆಸಲು ಪಠ್ಯೇತರ ಚಟುವಟಿಕೆಗಳು ಪೂರಕವಾಗಿರುತ್ತವೆ. ಮಕ್ಕಳು ತಮ್ಮ ಆಸಕ್ತಿಯನ್ನು ಅರಿತುಕೊಂಡು ಆಯಾ ಕ್ಷೇತ್ರದಲ್ಲಿ ಮುಂದುವರಿಯಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ? ಅವರ ಮಾನಸಿಕ-ಶಾರೀರಿಕ ಬಲ ವೃದ್ಧಿಗೊಳ್ಳುತ್ತದೆ ಎಂದು ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಕಾಲೇಜು ವಾರ್ಷಿಕೋತ್ಸವದ ಮುನ್ನುಡಿಯಾಗಿ ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಗಣಹೋಮ ನಡೆಯಿತು. ಬಳಿಕ ವೀರರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಲಾಯಿತು. ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸ್ಪರ್ಧೆಗಳ ಹಾಗೂ ಕಾಲೇಜಿನ ವಿವಿಧ ಸಂಘಗಳ ವತಿಯಿಂದ ನಡೆಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜತೆಗೆ ಕಾಲೇಜು ವಾರ್ಷಿಕ ಕ್ರೀಡಾಕೂಟದ ವಿವಿಧ ಪಂದ್ಯಾಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ಡಾ. ಮುರಳಿಕೃ? ರೈ, ಕಾಲೇಜು ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಹರಿಣಾಕ್ಷಿ ಜೆ ಶೆಟ್ಟಿ ಉಪಾಧ್ಯಕ್ಷರಾದ ರಾಮಕೃಷ್ಣ ಭಟ್, ಹಾಗೂ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಉಪಸ್ಥಿತರಿದ್ದರು. ಆಂಗ್ಲಭಾ? ಉಪನ್ಯಾಸಕರಾದ ಪಿ. ಕೆ ಪರಮೇಶ್ವರ ಶರ್ಮ ಸ್ವಾಗತಿಸಿ, ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಶೃತಿ ಎಂ.ಎಸ್ ವಂದಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಕ್ಷಿತಾ ಬಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ವೇದಿಕೆಗೆ ಧೀರವನಿತೆಯ ಗೌರವಾರ್ಥ ’ವೀರರಾಣಿ ಅಬ್ಬಕ್ಕ ವೇದಿಕೆ’  ಹೆಸರು 
 ಭಾರತದ ನೆಲದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿ ಹಿಮ್ಮೆಟ್ಟಿಸಿದ ತುಳುನಾಡ ವೀರ ರಾಣಿ ಅಬ್ಬಕ್ಕದೇವಿಯ 500ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಮೂರು ದಿನಗಳ ಕಾಲೇಜು ವಾರ್ಷಿಕೋತ್ಸವ ಹಾಗೂ ಕನಸುಗಳು ಕಾರ್ಯಕ್ರಮದ ವೇದಿಕೆಗೆ ಧೀರವನಿತೆಯ ಗೌರವಾರ್ಥ ’ವೀರರಾಣಿ ಅಬ್ಬಕ್ಕ ವೇದಿಕೆ’ ಎಂದು ಹೆಸರಿಡಲಾಗಿದೆ.


            







