ಪುತ್ತೂರು : ಮಾಣಿ ಉಪ ಅಂಚೆಕಚೇರಿಯು ಮಾಣಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಕಾಂಪ್ಲೆಕ್ಸ್‌ನ ಸುಸಜ್ಜಿತ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಡಾ. ಏಂಜಲ್ ರಾಜ್ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಈ ನೂತನ ಅಂಚೆ ಕಚೇರಿಯ ಮುಖಾಂತರ ಸಾರ್ವಜನಿಕರಿಗೆ ಆಧಾರ್ ಸೇವೆಯು ಸೇರಿದಂತೆ ಎಲ್ಲಾ ಅಂಚೆ ಸೇವೆಗಳು ಸುಗಮವಾಗಿ ಲಭಿಸುವಂತಾಗಲಿ ಎಂದು ಹಾರೈಸಿದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ, ಸಿಇಒ ಜನಾರ್ದನ ಮೂಲ್ಯ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಇಬ್ರಾಹಿಂ ಕೆ. ಮಾಣಿ ಮತ್ತು ಮೇಲ್ವಿನ್ ಕಿಶೋರ್ ಮಾರ್ಟಿಸ್, ಸಹಾಯಕ ಅಂಚೆ ಅಧೀಕ್ಷಕ ಜೋಸೆಫ್ ರೊಡ್ರಿಗಸ್, ಉಪ ಅಂಚೆಪಾಲಕಿ ಮೀನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಎ.ಜಿ. ಮರಡಿ ಕಾರ್ಯಕ್ರಮ ನಿರ್ವಹಿಸಿದರು. ಅಂಚೆ ಸಹಾಯಕ ಹರೀಶ್ ವಂದಿಸಿದರು.