ರೂ.1.37 ಲಕ್ಷ ಲಾಭ, ಶೇ.5 ಡಿವಿಡೆಂಡ್, 37 ಪೈಸೆ ಬೋನಸ್
ಪುತ್ತೂರು: ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ರೂ.2,37,85,965 ವ್ಯವಹಾರ ನಡೆಸಿ ರೂ.1,37,249.39 ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಶೇ.5 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 37 ಪೈಸೆ ಬೋನಸ್ ವಿತರಿಸಲಾಗುವುದು ಎಂದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶುಭಕರ ರೈಯವರು ಘೋಷಣೆ ಮಾಡಿದರು.
ಸಭೆಯು ಸೆ.15ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘವು ವರದಿ ವರದಿ ವರ್ಷದಲ್ಲಿ 54,14,359.38 ಮೊತ್ತದ 1,75,397 ಲೀಟರ್ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ರೂ.2,84,074.20 ಮೊತ್ತದ 6450.01 ಲೀಟರ್ ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ರೂ.9,48,025 ಮೊತ್ತದ 949 ಚೀಲ ಪಶು ಆಹಾರ ಮಾರಾಟ ಮಾಡಲಾಗಿದೆ. ರೂ.27,680 ಮೊತ್ತದ 692 ಕೆಜಿ ಲವಣ ಮಿಶ್ರಣ ಮಾರಾಟ ಮಾಡಲಾಗಿದೆ. ರೂ.17,372 ಮೊತ್ತದ 318.9 ಮಾದರಿ ಹಾಲು ಮಾರಾಟ ಮಾಡಲಾಗಿದೆ. ರೂ.4,84,280.40 ವ್ಯಾಪಾರ ಲಾಭ ಗಳಿಸಿದೆ.
ಹಾಲಿನ ದರ ಏರಿಕೆಗೆ ರೈತರ ಆಗ್ರಹ;
ಪ್ರಸ್ತುತವಾಗಿ ಹಾಲಿಗೆ ನೀಡುವ ದರದಲ್ಲಿ ಹೈನುಗಾರಿಕೆ ನಿರ್ವಹಣೆ ಸಾಧ್ಯವಿಲ್ಲ. ಹೀಗಾಗಿ ಹಾಲಿನ ದರ ಏರಿಕೆ ಮಾಡುವಂತೆ ರೈತರು ಆಗ್ರಹಿಸಿದರು.
ಬಹುಮಾನ ವಿತರಣೆ;
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ರಾಮಣ್ಣ ಪೂಜಾರಿ ಇರ್ದೆ(ಪ್ರ), ಅಜಿತಾ ಶಂಕರಿ(ದ್ವಿ), ದಿನೇಶ್ ಕುಮಾರ್ ರೈ ಬಾಳೆಹಿತ್ಲು(ತೃ) ಹಾಗೂ ರೈತರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಶು ವೈದ್ಯಾಧಿಕಾರಿ ಡಾ.ಅನುದೀಪ್ ರಾಸುಗಳ ಪಾಲನೆ, ಪೋಷಣೆಯ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಮಾಹಿತಿ ನೀಡಿದರು.
ನಿರ್ದೇಶಕರಾದ ಪಿ.ಸೇಸಪ್ಪ ಗೌಡ, ರಾಮಣ್ಣ ಪೂಜಾರಿ ಇರ್ದೆ, ಬಿ.ಚಂದ್ರಶೇಖರ ರೈ, ಅಜಿತಾ ಶಂಕರಿ ಹಾಗೂ ಬೇಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಶುಭಕರ ರೈ ಸ್ವಾಗತಿಸಿದರು. ಕಾರ್ಯದರ್ಶಿ ಜೆ.ರಾಜರಾಮ ಭಟ್ ವರದಿ ಹಾಗೂ ಆಯವ್ಯಯ ಮಂಡಿಸಿದರು. ಉಪಾಧ್ಯಕ್ಷ ಬಿ.ದಿನೇಶ್ ಕುಮಾರ್ ರೈ ವಂದಿಸಿದರು. ಸಹಾಯಕ ಯನ್ ಹಮೀದ್ ಸಹಕರಿಸಿದರು.