ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

3,24,12,368.29 ರೂ.ಗಳ ವ್ಯವಹಾರ, ರೂ, 12.95.233.79 ನಿವ್ವಳ ಲಾಭ- ಮಮತಾ ಕೆ.ಬಿ.ದೇವಸ್ಯ

ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘವು 2021-22ನೇ ಸಾಲಿನಲ್ಲಿ 3,24,12,368.29 ರೂ.ಗಳ ವ್ಯವಹಾರವನ್ನು ನಡೆಸಿ, 2,57,203,95 ಲೀ. ಹಾಲನ್ನು ರೂ, 77,08,330.41 ಕ್ಕೆ ಖರೀದಿಸಿ, ಸ್ಥಳೀಯ ಜನರಿಗೆ 20,714.50 ಲೀ ಹಾಲನ್ನು, ಒಕ್ಕೂಟಕ್ಕೆ 2,37,960 ಲೀಟರ್ ಹಾಲನ್ನು ಮಾರಾಟ ಮಾಡಲಾಗಿದೆ. ವರದಿ ಸಾಲಿನಲ್ಲಿ 2,222 ಚೀಲ ಪಶು ಆಹಾರ ಹಾಗೂ 1,353 ಕೆ.ಜಿ. ಲವಣ ಮಿಶ್ರಣ ಮಾರಾಟ ಮಾಡಿ, ಹಾಲು ವ್ಯಾಪಾರದಿಂದ , ಪಶು ಆಹಾರ ಮಾರಾಟದಿಂದ ಹಾಗೂ ಲವಣ ಮಿಶ್ರಣ ಮಾರಾಟದಿಂದ 9,01,255.83 ವ್ಯಾಪಾರ ಲಾಭ ಬಂದಿರುತ್ತದೆ. ಬಿ.ಎಂ.ಸಿ ಮತ್ತು ಮೇವಿನ ತಾಕುಗಳಿಂದ 2,26,066.97 ರೂ. ಲಾಭ ಬಂದಿರುತ್ತದೆ ಹಾಗೂ ಇತರ ಮೂಲಗಳಿಂದ ರೂ, 1.67,910.99 ಲಾಭ ಬಂದಿರುತ್ತದೆ ವರದಿ ಸಾಲಿನಲ್ಲಿ ಒಟ್ಟು ರೂ, 12.95.233.79 ವ್ಯಾಪಾರ ಲಾಭ ಬಂದಿದ್ದು, ಸಿಬ್ಬಂಧಿ ವೇತನ ಹಾಗೂ ಸಾದಿಲ್ವಾರು ಖರ್ಚುಗಳಿಗೆ ರೂ 6,37,839.95 ಖರ್ಚು ಆಗಿರುತ್ತದೆ. ಸವಕಳಿ ನಿಧಿ, ಲೆಕ್ಕ ಪರಿಶೋಧನಾ ಶುಲ್ಕ ರೂ, 97,760.0 ಕಾದಿರಿಸಿ, ಸಂಘವು ವರದಿ ಸಾಲಿನಲ್ಲಿ ರೂ 12.95.233.79 ನಿವ್ವಳ ಲಾಭ ಪಡೆದಿರುತ್ತದೆ ಎಂದು ಸಂಘದ ಅಧ್ಯಕ್ಷೆ ಮಮತಾ ಕೆ.ಬಿ ದೇವಸ್ಯರವರು ಹೇಳಿದರು.
ಅವರು ಸೆ. 16 ರಂದು ಸವಣೂರು ಯುವಸಭಾ ಭವನದಲ್ಲಿ ಜರಗಿದ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ಸಂಘದ ಎಲ್ಲಾ ಸದಸ್ಯರುಗಳು ಮತ್ತು ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ಪ್ರೋತ್ಸಾಹದಿಂದ ಸಂಘವು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ವರದಿ ಸಾಲಿನಲ್ಲಿ ಸದಸ್ಯರುಗಳಿಗೆ ಶೇ 25 ಡಿವಿಡೆಂಡ್ ನೀಡಲಾಗುವುದು, ಅಲ್ಲದೇ ಪ್ರತಿ ಲೀಟರ್ ಹಾಲಿಗೆ 94 ಪೈಸೆ ಬೋನಸ್ ನೀಡಲಾಗುತ್ತದೆ ಎಂದು ಮಮತಾ ಕೆ.ಬಿ, ದೇವಸ್ಯ ತಿಳಿಸಿದರು.

ಯುವಕರು ಮುಂಚೂಣಿಗೆ ಬರಬೇಕು- ಡಾ.ಸತೀಶ್ ರಾವ್
ದ.ಕ.ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ರವರು ಮಾತನಾಡಿ ಸವಣೂರು ಹಾಲು ಉತ್ವಾದಕರ ಸಂಘವು 37 ವರ್ಷಗಳಿಂದ ನಡೆಯುತ್ತಿದ್ದು, ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು, ಯುವಕರು ಮುಂಚೂಣಿಗೆ ಬರಬೇಕು. ಕೃಷಿ ಮತ್ತು ಹೈನುಗಾರಿಕೆ ಜೊತೆ,ಜೊತೆಯಾಗಿ ನಡೆಯಬೇಕು. ಆಗ ಮಾತ್ರ ಕೃಷಿಕ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ ಎಂದರು.

ಪ್ರಗತಿಯ ಹಾದಿಯಲ್ಲಿ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘ- ನಾಗೇಶ್ :
ದ,ಕ.ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್‌ಯವರು ಮಾತನಾಡಿ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘವು ಅತ್ಯುತ್ತಮವಾದ ಪ್ರಗತಿಯನ್ನು ಹೊಂದಿ, ಹೆಚ್ಚು ಲಾಭವನ್ನು ಪಡೆದಿರುವುದು ತುಂಬಾ ಸಂತೋಷದ ವಿಷಯವಾಗಿದ್ದು, ಹೈನುಗಾರರು 30 ನಿಮಿಷದ ಅವಧಿಯಲ್ಲಿ ಹಾಲನ್ನು ಕರೆದು ಸಂಘಕ್ಕೆ ತಲುಪಿಸಬೇಕು. ಹೆಚ್ಚು ಸಮಯ ಕಳೆದರೆ ಹಾಲಿನ ಗುಣಮಟ್ಟ ಕಡಿಮೆ ಆಗುತ್ತದೆ. ಶುದ್ಧ ಹಾಲು ಪೂರೈಕೆ ಮಾಡುವ ನಿಟ್ಟಿನಲ್ಲಿ ರೈತರು ವಿಶೇಷವಾದ ಕಾಳಜಿಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.

ಸವಣೂರು ಹಾಲು ಉತ್ಪಾದಕರ ಸಂಘದ ಪ್ರಗತಿ ಖುಷಿ ತಂದಿದೆ– ಸೀತಾರಾಮ ರೈ :
ದ.ಕ. ಸಹಕಾರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ನಿರ್ದೇಶಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಸಂಘವು 37 ವರ್ಷಗಳಿಂದ ಅತ್ಯುತ್ತಮವಾದ ರೀತಿಯಲ್ಲಿ ನಡೆಯುತ್ತಿದ್ದು, ಸಂಘದ ಪ್ರಥಮ ಮಹಿಳಾ ಅಧ್ಯಕ್ಷೆ ಮಮತಾ ದೇವಸ್ಯ ಮತ್ತು ಆಡಳಿತ ಮಂಡಳಿಯ ನೇತೃತ್ವದಲ್ಲಿ ಉತ್ತಮ ರೀತಿಯಲ್ಲಿ ಸಂಘ ನಡೆಯುತ್ತಿರುವುದು ತುಂಬಾ ಸಂತೋಷ ತಂದಿದೆ. ಸಂಘವು ವರದಿ ಸಾಲಿನಲ್ಲಿ 12.95 ಲಕ್ಷ ರೂ ಲಾಭ ಪಡೆದಿರುವುದು ಖುಷಿಯ ವಿಚಾರವಾಗಿದೆ ಎಂದು ಹೇಳಿದರು.

ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ:
ವರದಿ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ಹಾಕಿದವರಲ್ಲಿ ಪ್ರಥಮ- ಸುದರ್ಶನ್ ನಾÊಕ್ ಕಂಪ, ದ್ವಿತೀಯ- ಸವಣೂರು ಕೆ.ಸೀತಾರಾಮ ರೈ ಹಾಗೂ ತೃತೀಯ ಆಶಾ ರೈ ಕಲಾಯಿರವರುಗಳಿಗೆ ಸಂಘದ ವತಿಯಿಂದ ಬಹುಮಾನ ನೀಡಲಾಯಿತು. ಅಲ್ಲದೇ ಸಂಘದ ಎಲ್ಲ ಸದಸ್ಯರುಗಳಿಗೆ ಸ್ಟೀಲ್ ಪಾತ್ರೆಯನ್ನು ನೀಡಲಾಯಿತು.

ಪ್ರತಿಭಾ ಪುರಸ್ಕಾರ: ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಪ್ರೇಮಚಂದ್ರ ಮೆದು, ದೇವಪ್ಪ ಗೌಡ ಕನಡಕುಮೇರು, ಚೆನ್ನಪ್ಪ ಗೌಡ ಬುಡನಡ್ಕ, ಪ್ರಕಾಶ್ ಕೆ.ಕುದ್ಮನಮಜಲು, ವಿಜಯಲಕ್ಷ್ಮಿ ಕಾಯರ್ಗ, ಆಶಾ ರೈ ಕಲಾಯಿ, ಪ್ರಜ್ವಲ್ ಕೆ.ಆರ್ ಕೋಡಿಬೈಲು, ಯಶೋಧ ಬಸ್ತಿ, ಗಣೇಶ್ ಕೆ.ಕೆಡೆಂಜಿರವರುಗಳು ಉಪಸ್ಥಿತರಿದ್ದರು

ಸಂಘದ ನಿರ್ದೇಶಕ ಸುಪ್ರೀತ್ ರೈ ಖಂಡಿಗ ಸ್ವಾಗತಿಸಿ, ಕಾರ‍್ಯದರ್ಶಿ ಹರೀಶ್ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಗೌಡ ಆರೆಲ್ತಡಿ ವಂದಿಸಿದರು. ನವೋದಯ ಪ್ರೇರಕಿ ಪ್ರೇಮಾ ಪ್ರಾರ್ಥನೆಗೈದರು. ಸಮಾರಂಭದಲ್ಲಿ ಸವಣೂರು ಹಾಲು ಉತ್ವಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಸುಬ್ಬಣ್ಣ ರೈ ಖಂಡಿಗ, ಮಹಾಲಿಂಗ ಭಟ್ ಕುಕ್ಕುಜೆ, ಮಾಜಿ ನಿರ್ದೇಶಕರುಗಳಾದ ಸುದರ್ಶನ್ ನಾಯಕ್ ಕಂಪ, ರತ್ನಾಕರ ಪೂಜಾರಿ ಪೂಜಾರಿ ಅಗರಿ, ಸವಣೂರು ಸಿ.ಎ.ಬ್ಯಾಂಕ್ ನಿರ್ದೇಶಕ ಪ್ರಕಾಶ್ ರೈ ಸಾರಕರೆ, ಮುಖ್ಯಕರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ, ನಿವೃತ್ತ ಶಿಕ್ಷಕ ಮೋನಪ್ಪ ನಾಯ್ಕ್, ಸವಣೂರು ವಲಯ ರೈತ ಸಂಘದ ಅಧ್ಯಕ್ಷ ಯತೀಂದ್ರ ಶೆಟ್ಟಿ ಮಠ, ಯುವರಾಜ್ ಕಡಂಬ, ಕೃಷ್ಣ ಭಟ್ ಕುಕ್ಕುಜೆ ಸಹಿತ ಸವಣೂರು ಹಾಲು ಉತ್ಪಾದಕರ ಸಂಘದ ಸದಸ್ಯರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಘದ ಹುಲ್ಲುಗಾವಲು ಮೇಲ್ವಿಚಾರಕ ರಮೇಶ್ ಪಿ, ಹಾಲು ಪರೀಕ್ಷಕಿ ಸುಜಾತ, ಸಹಾಯಕಿ ಶೋಭಾ, ಕೃ,ಗ.ಕರ‍್ಯಕರ್ತ ಧನಂಜಯರವರು ಸಹಕರಿಸಿದರು.

ಹೆಚ್ಚು ಹೆಚ್ಚು ಹಾಲನ್ನು ಸಂಘಕ್ಕೆ ಪೂರೈಕೆ ಮಾಡಿ
ಸಂಘವು 37ನೇ ವರುಷದಲ್ಲಿ ಮುನ್ನಡೆಯುತ್ತಿದ್ದು, ಹೈನುಗಾರರ ನಿರಂತರ ಪ್ರೋತ್ಸಾಹದಿಂದ ಸಂಘವು ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಹೈನುಗಾರರು ಹೆಚ್ಚು ಹೆಚ್ಚು ಹಾಲನ್ನು ಸಂಘಕ್ಕೆ ಪೂರೈಕೆ ಮಾಡುವಲ್ಲಿ ಪ್ರಯತ್ನಿಸಿ, ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ಸಹಕರಿಸಿ –  ಮಮತಾ ಕೆ.ಬಿ. ದೆವಸ್ಯ -ಅಧ್ಯಕ್ಷರು

LEAVE A REPLY

Please enter your comment!
Please enter your name here