ಸುದ್ದಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರು ಅವಿರೋಧ ಆಯ್ಕೆ

0

ಅಧ್ಯಕ್ಷರಾಗಿ ಡಾ.ಯು.ಪಿ.ಶಿವಾನಂದ, ಉಪಾಧ್ಯಕ್ಷರಾಗಿ ಯು.ಪಿ ರಾಮಕೃಷ್ಣ ಪುನರಾಯ್ಕೆ


ಪುತ್ತೂರು:
ಸುದ್ದಿ ಸೌಹಾರ್ದ ಸಹಕಾರಿ ಸಂಘ ಪುತ್ತೂರು ಇದರ ಮುಂದಿನ ಐದು ವರ್ಷಗಳ ಅವಽಗೆ ಆಡಳಿತ ಮಂಡಳಿ ಸದಸ್ಯರು ಅವಿರೋಧವಾಗಿ ಅಯ್ಕೆಯಾಗಿದ್ದು ನೂತನ ಅಧ್ಯಕ್ಷರಾಗಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಹಾಗೂ ಉಪಾಧ್ಯಕ್ಷರಾಗಿ ಯು.ಪಿ.ರಾಮಕೃಷ್ಣ ಪುನರಾಯ್ಕೆಯಾಗಿದ್ದಾರೆ.


ಒಟ್ಟು 13 ಸ್ಥಾನಗಳನ್ನು ಹೊಂದಿರುವ ಸಹಕಾರ ಸಂಘದ ಎಲ್ಲಾ ನಿರ್ದೇಶಕ ಸ್ಥಾನಗಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಾಮಾನ್ಯ ಸ್ಥಾನದಿಂದ ಹಾಲಿ ಅಧ್ಯಕ್ಷ ಡಾ.ಯು.ಪಿ.ಶಿವಾನಂದ,ಹಾಲಿ ಉಪಾಧ್ಯಕ್ಷ ಯು.ಪಿ ರಾಮಕೃಷ್ಣ ಗುಜ್ಜರ್ಮೆ ಚಾರ್ವಾಕ, ಹಾಲಿ ನಿರ್ದೇಶಕರಾದ ರಾಜೇಶ್ ಎಂ.ಎಸ್.ಮಾಡಾವು ಸಂಪಾಜೆ,ಕೆ.ಎಂ.ಮೋಹನ ರೈ ಮಾಡಾವು, ಎನ್.ಕೆ.ಜಗನ್ನಿವಾಸ ರಾವ್ ನಟ್ಟೋಜ ಬಪ್ಪಳಿಗೆ, ಈಶ್ವರ ವಾರಣಾಸಿ ಸುಳ್ಯ,ಪ.ಜಾತಿ ಮೀಸಲು ಸ್ಥಾನದಿಂದ ಶೇಷಪ್ಪ ಕೆ.ಕಜೆಮಾರ್ ಕೆದಂಬಾಡಿ, ಪ.ಪಂಗಡ ಮೀಸಲು ಸ್ಥಾನದಿಂದ ಸುಂದರ ನಾಯ್ಕ ಕೆ.ಕರ್ಕುಂಜ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.ಸಾಮಾನ್ಯ ಸ್ಥಾನದಿಂದ ನಟರಾಜ ಎನ್.ಎಸ್.ನ್ಯೂ ನಟ್ಟೋಜ ಬಪ್ಪಳಿಗೆ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ನರೇಶ್ ಜೈನ್ ಬನ್ನೂರು, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಸಾಜ ರಾಧಾಕೃಷ್ಣ ಆಳ್ವ ಬಳ್ಳಮಜಲು ಕುರಿಯ ಹಾಗೂ ಮಹಿಳಾ ಮೀಸಲು ಸ್ಥಾನದಿಂದ ಶೋಭಾ ಸಿ ಅಡಿಗ ಮಿಶನ್‌ಗುಡ್ಡೆ ಬೊಳುವಾರು ಹಾಗೂ ಸರಿತಾ ಶಾಂತಿ ಕುಟಿನ್ಹಾ ನೂತನವಾಗಿ ಅವಿರೋಧ ಆಯ್ಕೆಯಾಗಿದ್ದಾರೆ.


ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ:
ನ.5ರಂದು ಅಧ್ಯಕ್ಷ, ಉಪಾಧ್ಯಕ್ಷರ ಅಯ್ಕೆ ಪ್ರಕ್ರಿಯೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಹಾಲಿ ಅಧ್ಯಕ್ಷ ಡಾ.ಯು.ಪಿ ಶಿವಾನಂದರವರನ್ನು ಎನ್.ಕೆ.ಜಗನ್ನಿವಾಸ ರಾವ್ ಸೂಚಿಸಿ, ಸಾಜ ರಾಧಾಕೃಷ್ಣ ಆಳ್ವ ಅನುಮೋದಿಸಿದರು.ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಹಾಲಿ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಅವರನ್ನು ಕೆ.ಎಂ.ಮೋಹನ್ ರೈ ಸೂಚಿಸಿ, ಶೇಷಪ್ಪ ಕಜೆಮಾರ್ ಅನುಮೋದಿಸಿದರು.ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಮಂಗಳೂರು ಉಪನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ನವೀನ್ ಕುಮಾರ್ ಎಂ.ಎಸ್ ಚುನಾವಣಾಧಿಕಾರಿಯಾಗಿದ್ದರು.

LEAVE A REPLY

Please enter your comment!
Please enter your name here