ಪುತ್ತೂರು: ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡ ವಿವಿಧ ಪ್ರತ್ಯೇಕ ಪ್ರಕರಣಗಳ ಆರೋಪಿಗಳಿಗೆ ಜಾಮೀನು ನೀಡಿದ ವ್ಯಕ್ತಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ದ FLW crlmc ನಂಬರ್ 04/22 ರಲ್ಲಿ ರೂ.40ಸಾವಿರ, FLW crlmc ನಂಬರ್ 10/2022 ರಲ್ಲಿ ರೂ.20ಸಾವಿರ, FLW crlmc78/2021ರಲ್ಲಿ ರೂ.4೦ಸಾವಿರ ಒಟ್ಟು 1,00,000 ಕಟ್ಟಲು ಬಾಕಿ ಇರುವ ಆರೋಪಿಗಳಿಗೆ ಪದೇ ಪದೇ ಜಾಮೀನ್ ನಿಲ್ಲುವ ಮುಂಡೂರು ಬೊಳ್ಳುಗುಡ್ಡೆ ನಿವಾಸಿ ಆಲಿಕುಂಞ(೫೫ವ) ರವರನ್ನು ಪುತ್ತೂರು ಪೊಲೀಸರು ಸೆ.೧೯ ರಂದು ಪುತ್ತೂರು ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ವ್ಯಕ್ತಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸುನಿಲ್ ಕುಮಾರ್ ಮಾರ್ಗದರ್ಶನದಲ್ಲಿ ಎಸ್ ಐ ಶ್ರೀಕಾಂತ್ ರಾಥೋಡ್ ನೇತೃತ್ರವದಲ್ಲಿ ಹೆಡ್ ಕಾನ್ ಸ್ಟೇಬಲ್ ಪರಮೇಶ್ವರ, ರಾಧಾಕೃಷ್ಣ ಅವರು ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.