ಸ್ನೇಹಿತನಿಗೆ ಬೆದರಿಕೆ ಕರೆ ವಿಚಾರಿಸಿದಕ್ಕೆ ಬಾರ್‌ನೊಳಗೆ ಹಲ್ಲೆ, ದರೋಡೆ – ಆರೋಪಿಗಳನ್ನು ಬಂಧಿಸಿದ ಪುತ್ತೂರು ಡಿವೈಎಸ್ಪಿ ನೇತೃತ್ವದ ತಂಡ

0

 

ಪುತ್ತೂರು: ಸ್ನೇಹಿತನಿಗೆ ಪೋನ್ ಕರೆ ಮಾಡಿ ಬೆದರಿಕೆಯೊಡ್ಡಿರುವುದನ್ನು ವಿಚಾರಿಸಿದಾತನಿಗೆ ತಂಡವೊಂದು ಬಾರ್‌ನೊಳಗೆ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ಪುತ್ತೂರು ಮುಖ್ಯರಸ್ತೆಯ ಬಾರ್‌ವೊಂದರಲ್ಲಿ ಸೆ.17ರಂದು ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಪುತ್ತೂರು ಡಿವೈಎಸ್ಪಿ ನೇತೃತ್ವದ ತಂಡ ಬಂಧಿಸಿದೆ.

ದರ್ಬೆಯಲ್ಲಿರುವ ಚೋಳಮಂಡಲ ಫೈನಾನ್ಸ್‌ನಲ್ಲಿ ಲೋನ್ ರಿಕವರಿ ಕರ್ತವ್ಯ ಮಾಡುತ್ತಿರುವ ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ಅವಿನಾಶ್(29ವ)ರವರು ಹಲ್ಲೆಗೊಳಗಾದವರು. ಮತ್ತು ಅವರ ಕಿಸೆಯಲ್ಲಿದ್ದ ನಗದನ್ನು ಆರೋಪಿಗಳು ದೋಚಿದ್ದರು. ಘಟನೆಯಿಂದ ಅವಿನಾಶ್  ಅವರ ಕಣ್ಣಿಗೆ ತೀವ್ರ ಗಾಯವಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆ ವಿವರ:
ಅವಿನಾಶ್ ಅವರ ಗೆಳೆಯ ಸಚಿನ್‌ಗೆ ಪ್ರತಾಪ್ ಎಂಬವರು ಪೋನ್ ಕರೆ ಮಾಡಿ ಬೆದರಿಕೆಯೊಡ್ಡಿದ್ದರು. ಈ ಕುರಿತು ಅವಿನಾಶ್ ಅವರು ಪ್ರತಾಪ್ ಅವರನ್ನು ವಿಚಾರಿಸಿದಾಗ ಪುತ್ತೂರು ಮಹಾಲಿಂಗೇಶ್ವರ ದೇವಳದ ಗದ್ದಗೆ ಬರುವಂತೆ ತಿಳಿಸಿದ್ದರು. ಅದೇ ರೀತಿ ಅಲ್ಲಿ ಪ್ರತಾಪ್ ಮತ್ತು ಅಚ್ಚು ಯಾನೆ ಜಗದೀಶ್ ಅವರು ಮಾತಿನ ಚಕಮಕಿ ನಡೆದಿತ್ತು. ಬಳಿಕ ಸಂಜೆ ಅವಿನಾಶ್ ಅವರು ತನ್ನ ಸ್ನೇಹಿತ ಸಚಿನ್ ಜೊತೆಗೆ ನಿರಾಲ ಬಾರ್‌ಗೆ ಹೋಗಿ ಮೇಲಿನ ಅಂತಸ್ತಿನಲ್ಲಿ ಕೂತಿದ್ದಾಗ ಅಲ್ಲಿಗೆ ಬಂದ ಪ್ರತಾಪ್, ಅಚ್ಚು ಯಾನೆ ಜಗದೀಶ್, ಶರತ್, ಅಭಿಜೀತ್ ಅವರು ಬಂದು ಸಚಿನ್ ಮತ್ತು ಅವಿನಾಶ್ ಅವರಿಗೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಅವಿನಾಶ್ ಅವರ ಕಣ್ಣಿಗೆ ಗಾಯವಾಗಿತ್ತು. ಈ ನಡುವೆ ಅವಿನಾಶ್ ಅವರ ಕಿಸೆಯಲ್ಲಿದ್ದ ಲೋನ್ ರಿಕವರಿ ರೂ. 3,720 ಮತ್ತು ಮೊಬೈಲ್ ಪೋನ್ ಅನ್ನು ಹಲ್ಲೆ ನಡೆಸಿದ ಅರೋಪಿಗಳು ದೋಚಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿತ್ತು. ತೀವ್ರ ಗಾಯಗೊಂಡ ಅವಿನಾಶ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಘಟನೆ ಕುರಿತು ಅವಿನಾಶ್ ಅವರ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಬನ್ನೂರು ನಿವಾಸಿಗಳಾದ ಪ್ರತಾಪ್, ಅಚ್ಚು ಯಾನೆ ಜಗದೀಶ್, ಶರತ್ ಜೈನರಗುರಿ, ಅಭಿಜೀತ್ ಅವರನ್ನು ಪೊಲೀಸರು ಸೆ.19ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ದ.ಕ.ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ  ಅವರ ಮಾರ್ಗದರ್ಶನದಲ್ಲಿ ಪುತ್ತೂರು ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠರವರ ನೇತೃತ್ವದಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುನಿಲ್ ಕುಮಾರ್, ಪಿಎಸೈ ಶ್ರೀಕಾಂತ್ ರಾಠೋಡ್, ಎ.ಎಸ್.ಐ, ಕೃಷ್ಣಪ್ಪ, ಸಿಬ್ಬಂದಿಗಳಾದ ಸ್ಕರೀಯ, ಜಗದೀಶ, ಸುಬ್ರಹ್ಮಣ್ಯ, ಕಿರಣ ಕುಮಾರ,ಭೀಮಸೇನ ರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here