ಪುತ್ತೂರು : ಸುಳ್ಯದಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸಿ ಪ್ರಧಾನ ಕಚೇರಿಯನ್ನು ಹೊಂದಿರುವ ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ಧೇಶ ಸಹಕಾರ ಸಂಘದ ಕಡಬ ಶಾಖೆಯು ಸೆ.26ರಂದು ಉದ್ಘಾಟನೆಗೊಳ್ಳಲಿದೆ.
ಕಡಬದ ಸಂತ ಜೋಕಿಮ್ ಸಭಾಭವನದಲ್ಲಿ ನಡೆಯುವ ನೂತನ ಶಾಖೆಯ ಉದ್ಘಾಟನೆಯನ್ನು ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಗೀವಗೀಸ್ ಮಾರ್ ಮಕ್ಕಾರಿಯೋಸ್ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ದ.ಕ. ಜಿಲ್ಲೆಯ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್ ವೆಬ್ಸೈಟ್ ಅನಾವರಣಗೊಳಿಸಲಿದ್ದಾರೆ. ಸೈಂಟ್ ಮೇರೀಸ್ ಫೊರೋನಾ ಚರ್ಚ್ನ ಧರ್ಮಗುರು ರೆ|ಫಾ| ಜೋಸ್ ಅಯಂಕುಡಿ ಎಫ್ಡಿ ಸರ್ಟಿಫಿಕೇಟ್ ವಿತರಿಸಲಿದ್ದಾರೆ. ಮಾಯಿದೆ ದೇವುಸ್ ಚರ್ಚ್ನ ವಿಕಾರ್ವಾರ್ ರೆ|ಫಾ| ಲೊರೆನ್ಸ್ ಮಸ್ಕರೇನಸ್ ಶೇರ್ ಸರ್ಟಿಫಿಕೇಟ್ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಯ ಸಂಚಾಲಕ ರೆ|ಫಾ| ಅರುಣ್ ವಿಲ್ಸನ್ ಲೋಬೋ, ಶ್ರೀ ದುರ್ಗಾಂಬಿಕಾ ದೇವಸ್ಥಾನದ ಅಧ್ಯಕ್ಷ ಸೀತಾರಾಮ ಪೊಸವಳಿಕೆ, ಮಾಜಿ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಗ್ರಾ.ಪಂ. ಮಾಜಿ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ ಭಾಗವಹಿಸಲಿದ್ದಾರೆ. ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಬಿಟ್ಟಿ ನೆಡುನೀಲಂ ಅಧ್ಯಕ್ಷತೆ ವಹಿಸಲಿದ್ದಾರೆ.