ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ: 33 ಕೋಟಿ ವ್ಯವಹಾರ, 51 ಲಕ್ಷ ಲಾಭ, 15 ಶೇಕಡಾ ಡಿವಿಡೆಂಟ್

0

50 ಲಕ್ಷ ವೆಚ್ಚದಲ್ಲಿ ಸಂಘದ ಕಟ್ಟಡ ನವೀಕರಣ.
ಅಕ್ಟೋಬರ್ ಅಂತ್ಯಕ್ಕೆ ಲೋಕಾರ್ಪಣೆ.
26 ಮಂದಿ ಹಿರಿಯ ಸದಸ್ಯರಿಗೆ ಸನ್ಮಾನ.
೧೦ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ.

ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘ ೨೦೨೧-೨೨ನೇ ಸಾಲಿನಲ್ಲಿ ೩೨ಕೋಟಿ ೮೪ ಲಕ್ಷದ ೮೯ ಸಾವಿರದ ೪೩೬ ರೂಪಾಯಿ ವ್ಯವಹಾರ ನಡೆಸಿ ೫೧ ಲಕ್ಷದ ೭೫ಸಾವಿರದ ೪೯೯ ರೂಪಾಯಿ ನಿವ್ವಲ ಲಾಭ ಗಳಿಸಿದ್ದು, ಸದಸ್ಯರಿಗೆ ೧೫ ಶೇಕಡಾ ಡಿವಿಡೆಂಟ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ ಘೋಷಣೆ ಮಾಡಿದರು.

ಅವರು ಸೆ. 24ರಂದು ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬಹುತೇಕ ಸಂಘಗಳು ಅಧಿಕ ಗ್ರಾಮ ವ್ಯಾಪ್ತಿಯನ್ನು ಹೊಂದಿ ಕಾರ್‍ಯಾಚರಿಸುತ್ತಿದ್ದು, ಆದರೆ ನಮ್ಮದು ೨ ಗ್ರಾಮ ವ್ಯಾಪ್ತಿಯನ್ನು ಹೊಂದಿದ್ದು, ಆದರೆ ಖರ್ಚು-ವೆಚ್ಚ ಕಡಿಮೆ ಮಾಡಿಕೊಂಡು ಲಾಭಾಂಶ ಉಳಿಕೆ ಅಧಿಕವಾಗುತ್ತಾ ಸಾಗಿ ಬಂದಿದ್ದು, ಸಂಘದ ಅಭಿವೃದ್ಧಿಗೆ ಸಹಕಾರಿ ಆಗಿರುವ ನಿರ್ದೇಶಕರು ಮತ್ತು ಸಂಘದ ಸದಸ್ಯರ ಸಹಕಾರಕ್ಕೆ ಅಭಾರಿ ಆಗಿರುವುದಾಗಿ ತಿಳಿಸಿದರು.

ಅಕ್ಟೋಬರ್ ಅಂತ್ಯಕ್ಕೆ ಲೋಕಾರ್ಪಣೆ
ಸಂಘದ ಕಟ್ಟಡವನ್ನು ವಿಸ್ತರಿಸಿ, ನವೀಕರಣ ಮಾಡುವ ಯೋಜನೆ ರೂಪಿಸಲಾಗಿದ್ದು, ಅದರಂತೆ ಸುಮಾರು ೫೦ ಲಕ್ಷದಲ್ಲಿ ಕಾಮಗಾರಿ ಪ್ರಗತಿಯಲ್ಲಿ ನಡೆಯುತ್ತಿದ್ದು, ಅಕ್ಟೋಬರ್ ತಿಂಗಳ ಕೊನೆಗೆ ಲೋಕಾರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.

ಹಿರಿಯ ಸದಸ್ಯರಿಗೆ ಸನ್ಮಾನ:
ಸಂಘದ ಹಿರಿಯ ಸದಸ್ಯರಾದ ಗೋಪಾಲ ಶೆಟ್ಟಿ ಮೊಮ್ಮರಿ, ಸುಂದರ ನಾಯ್ಕ ಅಡ್ಕಹಿತ್ಲು, ಕೃಷ್ಣ ಶೆಟ್ಟಿ ಕರ್‍ಲ, ಯಶೋಧರ ಹೆಗ್ಡೆ ಪಚ್ಚಾಡಿ, ಬಾಲಕೃಷ್ಣ ಸಪಲ್ಯ ಬೆದ್ರ, ಕಿಟ್ಟಣ್ಣ ನಾಯ್ಕ ಅವೇದಹಿತ್ಲು, ಬಾಲಕೃಷ್ಣ ಸಮಂತ ಮೈರ, ಮಾರಪ್ಪ ಮೂಲ್ಯ ಕರ್‍ಲ, ಜಿನ್ನಪ್ಪ ಗೌಡ ದೋರ್ಮೆ, ಕೇಶವ ಪೂಜಾರಿ ಕೆಳಗಿನಮನೆ, ರಾಜೀವ ಶೆಟ್ಟಿ ಕೇದಗೆ, ಕಲ್ಯಾಣಿ ಪೆಜಕುಡೆ, ಚೆನ್ನಪ್ಪ ಗೌಡ ಮಡತ್ತಾರು, ಸುರೇಶ್ ನಾಯಕ್ ಬಾರಿಕೆ, ಮಾದವ ಬಂಗೇರ ಕೋಡಿ, ಸುಶೀಲ ನಿರೋಬ್ಲೆ, ಐರಿನ್ ಮಸ್ಕರೇನಸ್ ಖಾನಾ ಬಿಳಿಯೂರು, ಅಬ್ದುಲ್ ಬಶೀರ್ ಕಡಂಬು, ಬಿ.ಎಂ. ಗಂಗಾಧರ ರೈ ವಾದ್ಯದಗಯ, ಲಕ್ಷ್ಮೀ ಪಚ್ಚಾಡಿ, ಕುಸುಮ ಮರಲ, ಕೃಷ್ಣಪ್ಪ ಪೂಜಾರಿ ದರ್ಖಾಸು, ಸುಬ್ರಹ್ಮಣ್ಯ ಭಟ್ ಸಂಪಿಗೆಕೋಡಿ, ನಾರಾಯಣ ಮೂಲ್ಯ ಕೋಡಿ, ಪಾಂಡುರಂಗ ಪೂಜಾರಿ ಕೆರೆಂಗೋಡಿ, ಲೀಲಾವತಿ ಕೋಡ್ಲೆ.

ಪ್ರತಿಭಾ ಪುರಸ್ಕಾರ:
ಸಂಘದ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳಾಗಿ ೨೦೨೧-೨೨ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮನುಶ್ರೀ (ಇಂದ್ರಪ್ರಸ್ಥ ಪಿಯು. ಕಾಲೇಜು ಉಪ್ಪಿನಂಗಡಿ), ಆಶಿಕಾ (ಪೆರ್ನೆ ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯ), ಕೆ. ವರ್ಷಿಣಿ ರೈ (ಇಂದ್ರಪ್ರಸ್ಥ ಪಿಯು. ಕಾಲೇಜು ಉಪ್ಪಿನಂಗಡಿ), ಕೆ. ಸ್ನೇಹಿತ್ (ವಿವೇಕಾನಂದ ಕಾಲೇಜು ಪುತ್ತೂರು). ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸುಮಂತ್ ಶೆಟ್ಟಿ (ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ), ಯು. ಅಮೃತ ದೇವಿ (ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ), ಪವಿತ್ರಾ ಪಿ., (ಸರ್ಕಾರಿ ಪ್ರೌಢ ಶಾಲೆ ಬಿಳಿಯೂರು), ಮೇಷಾ (ಸರ್ಕಾರಿ ಪ್ರೌಢ ಶಾಲೆ ಬಿಳಿಯೂರು), ಅಭಿಷೇಕ್ ಶೆಟ್ಟಿ (ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ), ಚೇತನ್ ಕುಮಾರ್ ಕೆ. (ಬಾಲವಿಕಾಸ ಆಂಗ್ಲ ಮಾದ್ಯಮ ಶಾಲೆ ಮಾಣಿ) ಇವರುಗಳನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯರಾದ ಗಂಗಾಧರ ರೈ, ಉಮಾನಾಥ ಶೆಟ್ಟಿ, ಮೋನಪ್ಪ ಶೆಟ್ಟಿ, ರಾಜೀವ ಶೆಟ್ಟಿ, ಮೋನಪ್ಪ, ಮಿತ್ರದಾಸ ರೈ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ನೀಲಪ್ಪ ಗೌಡ, ಲಕ್ಷ್ಮಣ ನಾಯ್ಕ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ರೇವತಿ ಪಿ., ಸುನಿಲ್ ನೆಲ್ಸನ್ ಪಿಂಟೋ, ವಿಶ್ವನಾಥ ಶೆಟ್ಟಿ, ಬಶೀರ್ ಕೆ., ಮಹಮ್ಮದ್ ಶರೀಫ್, ಚೆನ್ನಕೇಶವ, ಬೇಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ಡಾ. ರಾಜಗೋಪಾಲ ಶರ್ಮ ಸ್ವಾಗತಿಸಿ, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಪುಷ್ಪಾ ಡಿ. ಲೆಕ್ಕಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ತನಿಯಪ್ಪ ಪೂಜಾರಿ ವಂದಿಸಿದರು. ಸಿಬ್ಬಂದಿಗಳಾದ ನಳಿನಾಕ್ಷಿ ಶೆಟ್ಟಿ, ವಿಶ್ವನಾಥ, ಅಜಿತ್ ಕುಮಾರ್, ಮಾಲತಿ, ಪದ್ಮಾ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here