ನಿಡ್ಪಳ್ಳಿ: ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀಕ್ಷೇತ್ರ ನಿಡ್ಪಳ್ಳಿ ಇಲ್ಲಿ ಸೆ.26 ರಿಂದ ಅ.5 ರವರೆಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಗಳೊಂದಿಗೆ ನಡೆಯಲಿದೆ.
ಸೆ.26 ರಂದು ಬೆಳಿಗ್ಗೆ ಗಂಟೆ 8 ರಿಂದ ಶ್ರೀ ಮಹಾಗಣಪತಿ ಹವನ ನಂತರ ಶ್ರೀ ದೇವರಿಗೆ ಪಂಚವಿಂಶತಿ ಕಲಶ. ಗಂಟೆ 10 ಕ್ಕೆ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ದೀಪ ಬೆಳಗಿಸಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಿರುವರು.ನಂತರ ಭಜನಾ ಕಾರ್ಯಕ್ರಮ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ರಾತ್ರಿ ಗಂಟೆ 7 ರಿಂದ ಮಹಾಪೂಜೆ ಶ್ರೀ ದೇವರಿಗೆ ಸಾಮೂಹಿಕ ವಿಶೇಷ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸೆ.27 ರಂದು ಬೆಳಿಗ್ಗೆ ನಿತ್ಯಪೂಜೆ, ನಂತರ ಭಜನೆ ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ಸಂಜೆ ಭಜನೆ ರಾತ್ರಿ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ.
ಸೆ.28 ರಂದು ಬೆಳಿಗ್ಗೆ ನಿತ್ಯಪೂಜೆ ನಂತರ ಭಜನೆ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ. ಸಂಜೆ ಕುಣಿತ ಭಜನೆ ರಾತ್ರಿ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ.
ಸೆ.29 ರಂದು ಬೆಳಿಗ್ಗೆ ನಿತ್ಯಪೂಜೆ, ನಂತರ ಭಜನೆ ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ಸಂಜೆ ಭಜನೆ ರಾತ್ರಿ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ.
ಸೆ.30 ರಂದು ಬೆಳಿಗ್ಗೆ ನಿತ್ಯಪೂಜೆ ನಂತರ ಭಜನೆ ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ಸಂಜೆ ಭಜನೆ ರಾತ್ರಿ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ.
ಅ.1 ರಂದು ಬೆಳಿಗ್ಗೆ ನಿತ್ಯಪೂಜೆ ನಂತರ ಸಾಮೂಹಿಕ ಚಂಡಿಕಾ ಹೋಮ ಪ್ರಾರಂಭ ಮಧ್ಯಾಹ್ನ ಚಂಡಿಕಾ ಹೋಮದ ಪೂರ್ಣಾಹುತಿ ನಂತರ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ಸಂಜೆ ಕುಣಿತ ಭಜನೆ ರಾತ್ರಿ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ.
ಅ.2 ರಂದು ಬೆಳಿಗ್ಗೆ ನಿತ್ಯಪೂಜೆ, ನಂತರ ಭಜನೆ ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ಸಂಜೆ ಕುಣಿತ ಭಜನೆ ರಾತ್ರಿ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ.
ಅ.3 ರಂದು ಬೆಳಿಗ್ಗೆ ನಿತ್ಯಪೂಜೆ ನಂತರ ಭಜನೆ ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ಸಂಜೆ ಕುಣಿತ ಭಜನೆ ರಾತ್ರಿ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ.
ಅ.4 ರಂದು ಬೆಳಿಗ್ಗೆ ನಿತ್ಯಪೂಜೆ ನಂತರ ವಿಶೇಷ ಆಯುಧ ಪೂಜೆ ಪ್ರಾರಂಭ.ಭಜನೆ ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ಸಂಜೆ ಭಜನೆ ರಾತ್ರಿ ಮಹಾನವಮಿಯ ಪ್ರಯುಕ್ತ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ.
ಅ.5 ರಂದು ಬೆಳಿಗ್ಗೆ ನಿತ್ಯಪೂಜೆ ನಂತರ ಕದಿರು ತುಂಬಿಸುವುದು ಅಕ್ಷರಾಭ್ಯಾಸ ಭಜನೆ ಮಧ್ಯಾಹ್ನ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.