ಮುರ ಗೌಡ ಸಮುದಾಯ ಭವನದಲ್ಲಿ ಉಚಿತ ವೈದ್ಯಕೀಯ, ದಂತ ತಪಾಸಣಾ ಶಿಬಿರ

0

ಪುತ್ತೂರು: ಧರಿತ್ರಿ ಸೌಹಾರ್ದ ಸಹಕಾರಿ ಮುರ ಕಬಕ, ಕಲ್ಲೇಗ ಗೌಡ ಯುವ ಸಂಘ ಮುರ ಕಬಕ, ಎಂ.ವಿ.ಫೌಂಡೇಶನ್ ಪುತ್ತೂರು, ಶಕ್ತಿ ಯುವಕ ವೃಂದ ಮುರ ಕಲ್ಲೇಗ, ಓಂ ಫ್ರೆಂಡ್ಸ್ ಶೇವಿರೆ, ಕಲ್ಲೇಗ, ಪುತ್ತೂರು ತಾಲೂಕು ಎಂ.ಆರ್.ಡಬ್ಲ್ಯೂ., ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂಗಳ ತಾಲೂಕು ಒಕ್ಕೂಟ ಪುತ್ತೂರು, ಎ.ಜೆ.ವೈದ್ಯಕೀಯ ಹಾಗೂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮಂಗಳೂರು, ಗ್ರಾಮ ವಿಕಾಸ ಸಮಿತಿ ಕಬಕ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ ಸೆ.25ರಂದು ಬೆಳಿಗ್ಗೆ 9.30ರಿಂದ ಅಪರಾಹ್ನ 2ರವರೆಗೆ ಮುರ ಗೌಡ ಸಮುದಾಯ ಭವನದಲ್ಲಿ ನಡೆಯಿತು.


ಶಾಸಕ ಸಂಜೀವ ಮಠಂದೂರು ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಸರಕಾರಿ ಸೌಲಭ್ಯಗಳು ಮತ್ತು ಇಂತಹ ಶಿಬಿರಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ಸರಕಾರಿ ಸೌಲಭ್ಯಗಳ ಮಾಹಿತಿಯು ತಲುಪುವಂತಾಗಲಿ ಎಂದು ಹೇಳಿ ಎಲ್ಲರೂ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಇಂತಹ ಸಮಾಜಮುಖಿ ಕೆಲಸ ಕಾರ್ಯಗಳು ನಿರಂತರ ನಡೆಯುವಂತಾಗಲಿ ಎಂದು ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಲ್ಲೇಗ ಮಾತನಾಡಿ ಗ್ರಾಮ ಪಂಚಾಯತ್ ವತಿಯಿಂದ ಇ- ಶ್ರಮ್ ಕಾರ್ಡ್ ಹಾಗೂ ಆರೋಗ್ಯ ಕಾರ್ಡು ಉಚಿತವಾಗಿ ನೋಂದಣಿ ಮಾಡಲಾಗುವುದು. ಇದರ ಸದುಪಯೋಗ ಪಡೆಯಬೇಕಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಕಬಕ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಗೌಡ ಪೋಳ್ಯ ಹಾಗೂ ಮಂಗಳೂರು ಏ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ನವೀನ್ ಕುಮಾರ್ ಎಮ್ ಆಸ್ಪತ್ರೆ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಧರಿತ್ರಿ ಸೌಹಾರ್ದ ಸಹಕಾರಿ ಅಧ್ಯಕ್ಷ, ವಸಂತ ಗೌಡ ಸ್ವಾಗತಿಸಿದರು. ಉಪಾಧ್ಯಕ್ಷೆ ನೇತ್ರಾವತಿ, ಕಲ್ಲೇಗ ಗೌಡ ಸಮುದಾಯ ಭವನ ಸ್ಥಾಪಕ ಅಧ್ಯಕ್ಷ ಜಿನ್ನಪ್ಪ ಗೌಡ, ಮುರ ಗೌಡ ಸಮುದಾಯ ಭವನದ ಉಸ್ತುವಾರಿ ನಾರಾಯಣ ಗೌಡ, ಮುರ ಗೌಡ ಸಮುದಾಯ ಭವನದ ಅಧ್ಯಕ್ಷ ಬಾಬು ಗೌಡ, ಎಂ. ವಿ ಫೌಂಡೇಶನ್‌ನ ಸ್ಥಾಪಕ ಪಿ.ವಿ ಸುಬ್ರಮಣಿ, ಮುರ ಶಕ್ತಿ ಯುವಕ ವೃಂದದ ಅಧ್ಯಕ್ಷ ಉಮೇಶ್ ಆಚಾರ್ಯ, ಹಾಗೂ ಕಲ್ಲೇಗ ಶೇವಿರೆ ಓಂ ಫ್ರೆಂಡ್ಸ್ ಅಧ್ಯಕ್ಷ ಚೆನ್ನಪ್ಪ, ಪುತ್ತೂರು ತಾಲೂಕು ಎಂ ಆರ್ ಡಬ್ಲ್ಯೂ,ವಿ ಆರ್ ಡಬ್ಲ್ಯೂ ಡಬ್ಲ್ಯೂ ತಾಲೂಕು ಒಕ್ಕೂಟದ ಅಧ್ಯಕ್ಷ ಸೇಸಪ್ಪ, ವಿಕಾಸದ ಗ್ರಾಮ ಪ್ರಮುಖ ರಘುರಾಜ್ ಭಟ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಬಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕಿಯರು, ಎ.ಜೆ ಆಸ್ಪತ್ರೆಯ ವೈದ್ಯರು ಹಾಗೂ ಸಹಾಯಕರು ಸಹಕರಿಸಿದರು.

ಜಿಡೆಕಲ್ಲು ಸರಕಾರಿ ಪದವಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಶಿವಮಣಿ ಕಲಾಸಂಘ ಪುತ್ತೂರು ತಂಡದವರು ಸ್ವಯಂಸೇವಕರಾಗಿ ಸಹಕರಿಸಿದರು.

ಮುಖ್ಯ ಕಾರ್ಯನಿರ್ವಾಹಕ ದಿವ್ಯಶ್ರೀ ಆರ್. ವಿ, ನಿರ್ದೇಶಕರಾದ ರವೀಂದ್ರ ಆಚಾರ್ಯ ಕೆ, ಮೋಹನ ಗೌಡ, ವಸಂತ.ಪಿ , ರಕ್ಷಿತ್ , ಪ್ರೇಮಾ, ಚಿತ್ರ, ಪ್ರತಿಮಾ, ಸೇಸಪ್ಪ , ರಶ್ಮಿ, ಸಿಬ್ಬಂದಿಗಳಾದ ಕಾವ್ಯ, ಗಣೇಶ್ ಉಪಸ್ಥಿತರಿದ್ದರು. ಕಲ್ಲೇಗ ಓಂ ಫ್ರೆಂಡ್ಸ್ ಶೇವಿರೆ ವ್ಯವಸ್ಥಾಪಕ ಅಜಯ್ ನಿರೂಪಿಸಿದರು. ಎಂವಿ ಫೌಂಡೇಶನ್‌ನ ಸ್ಥಾಪಕ ಪಿ.ವಿ ಸುಬ್ರಮಣಿ ಧನ್ಯವಾದವಿತ್ತರು. ಧರಿತ್ರಿ ಸೌಹಾರ್ದ ಸಹಕಾರಿಯ ನಿರ್ದೇಶಕಿ ಪ್ರೇಮರವರ ಪ್ರಾರ್ಥನೆಯಿಂದ ಪ್ರಾರಂಭವಾಯಿತು.

LEAVE A REPLY

Please enter your comment!
Please enter your name here