





ಪುತ್ತೂರು: ಸತತ ನೇ ವರ್ಷವೂ ಮುಂಡೂರು ಗ್ರಾ.ಪಂ ಸದಸ್ಯ ಉಮೇಶ್ ಗೌಡ ಅಂಬಟ ಅವರು ಗಾಂಧಿ ಜಯಂತಿ ದಿನದಂದು ಗಾಂಧಿ ವೇಷಭೂಷಣ ತೊಟ್ಟು ಗಮನ ಸೆಳೆದಿದ್ದಾರೆ.








ಮುಂಡೂರು ಗ್ರಾ.ಪಂ.ನಲ್ಲಿ ಹಾಗೂ ಮುಂಡೂರು ಶಾಲೆಯಲ್ಲಿ ಅ.2 ರಂದು ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ವೇಷ ಭೂಷಣ ತೊಟ್ಟಿದ್ದ ಉಮೇಶ್ ಗೌಡ ಅಂಬಟ ಅವರು ಭಾಗವಹಿಸಿದ್ದು ಅವರ ಜೊತೆ ಹಲವಾರು ಮಂದಿ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಕಳೆದ ವರ್ಷವೂ ಗಾಂಧಿ ವೇಷ ಭೂಷಣ ತೊಟ್ಟು ಉಮೇಶ್ ಗೌಡ ಅಂಬಟ ಗಮನ ಸೆಳೆದಿದ್ದರು.


            






