ರಾಮನಗರ: ಸರಸ್ವತಿ ಹವನದೊಂದಿಗೆ ಶಾರದೆಗೆ ಮಹಾಪೂಜೆ

0

ಉಪ್ಪಿನಂಗಡಿ: ಇಲ್ಲಿನ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ನಡೆಯುತ್ತಿರುವ 28ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದಲ್ಲಿ ಎರಡನೇ ದಿನವಾದ ಸೋಮವಾರ ಬೆಳಗ್ಗೆಯಿಂದಲೇ ಧಾರ್ಮಿಕ- ವಿಧಿ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಬೆಳಗ್ಗೆ ಭಜನಾ ಕಾರ್ಯಕ್ರಮಗಳು ನಡೆದು, ಸರಸ್ವತಿ ಹವನ ನಡೆಯಿತು. ಬಳಿಕ ಹವನದ ಪೂರ್ಣಾಹುತಿ ನಡೆದು, ಮಹಾಪೂಜೆಯಾಗಿ ಅನ್ನಪ್ರಸಾದ ವಿತರಿಸಲಾಯಿತು. ಬಳಿಕ ರಾತ್ರಿ ಪೂಜೆ, ಭಜನಾ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಡಾ. ಕೃಷ್ಣಪ್ರಸಾದ್ ದೇವಾಡಿಗರಿಂದ ‘ಸಾಕ್ಸೋಫೋನ್ ವಾದನ’, ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಡಿ.ಪಿ. ಮ್ಯೂಸಿಕಲ್ ಇವರಿಂದ ಸಂಗೀತ ರಸಮಂಜರಿ (ಕರೋಕೆ) ನಡೆಯಿತು. ರಾತ್ರಿ ಸ್ಥಳೀಯ ನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಬಿಎಸ್ಸೆಫ್‌ನ ನಿವೃತ್ತ ಉಪ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ಅವರು ಪ್ರತಿ ಮನೆಯಲ್ಲಿಯೂ ಭಗವದ್ಗೀತೆ ಇರಬೇಕೆಂಬ ಆಶಯದೊಂದಿಗೆ ‘ಭಗವದ್ಗೀತಾ ಜ್ಞಾನ ಜ್ಯೋತಿ’ ಅಭಿಯಾನವನ್ನು ಹಮ್ಮಿಕೊಂಡು ಉಚಿತವಾಗಿ ಭಗವದ್ಗೀತೆ ಪುಸ್ತಕಗಳ ವಿತರಣೆ ಮಾಡುತ್ತಿದ್ದು, ಇದರ ಬಗ್ಗೆ ಮಾಹಿತಿ ನೀಡಿದ ಅವರು, ಪ್ರತಿಯೋರ್ವನೂ ಧರ್ಮಗ್ರಂಥವಾದ ಭಗವದ್ಗೀತೆಯ ಸಾರವನ್ನು ಅರಿತಿರಬೇಕು ಎಂಬ ಉದ್ದೇಶದೊಂದಿಗೆ ನಾನು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈಗಾಗಲೇ ಹಲವು ಪುಸ್ತಕಗಳನ್ನು ವಿತರಿಸಿದ್ದೇನೆ. ನಾಳೆ ಇಲ್ಲಿಯೂ ಭಗವದ್ಗೀತೆಯನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದ್ದು, ಮನೆಯಲ್ಲಿ ಭಗವದ್ಗೀತೆ ಪುಸ್ತಕ ಇಲ್ಲದವರು ಇದನ್ನು ಪಡೆದುಕೊಂಡು ಜ್ಞಾನಜ್ಯೋತಿಯಾದ ಭಗವದ್ಗೀತೆಯ ಸಾರವನ್ನು ಅರಿತುಕೊಳ್ಳಬೇಕೆಂದು ತಿಳಿಸಿದರಲ್ಲದೆ, ಪ್ರಧಾನ ಮಂತ್ರಿಯವರ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ವಿತರಣೆಯ ಬಗ್ಗೆ ಹಾಗೂ ಮನೆಯಲ್ಲಿರಬೇಕಾದ ಸುರಕ್ಷತಾ ಕಿಟ್‌ಗಳ ಬಗ್ಗೆ ಮಾಹಿತಿ ನೀಡಿದರು.

ಪುರೋಹಿತರಾದ ಲಕ್ಷ್ಮೀನಾರಾಯಣ ಭಟ್ ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಕಾರ್ಯದರ್ಶಿ ಎನ್. ರಾಜಗೋಪಾಲ್ ಹೆಗ್ಡೆ, ಕೋಶಾಧಿಕಾರಿ ಕಂಗ್ವೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷ ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ರಘುರಾಮ ಎ. ರಾಮನಗರ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಸದಸ್ಯರಾದ ಧನಂಜಯ ನಟ್ಟಿಬೈಲ್, ತಾ.ಪಂ. ಮಾಜಿ ಸದಸ್ಯೆ ಸುಜಾತಕೃಷ್ಣ ಆಚಾರ್ಯ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಜಯಂತ ಪೊರೋಳಿ, ನಿವೃತ್ತ ಯೋಧ ನಾರಾಯಣ ಹೆಗ್ಡೆ, ಪ್ರಮುಖರಾದ ಕೃಷ್ಣಪ್ಪ ಪೂಜಾರಿ, ಗಣೇಶ್ ಶೆಣೈ ಎನ್., ವಿಶ್ವನಾಥ ಶೆಣೈ, ದೀಪಕ್ ಪೈ, ಜಯರಾಮ ಆಚಾರ್ಯ, ಸಂದೇಶ್ ಶೆಣೈ, ಸಂದೀಪ್ ಶೆಣೈ, ಮಂಜುನಾಥ್ ಶೆಣೈ, ಪುಷ್ಪಲತಾ ಭಟ್, ಯೋಗೀಶ್ ಶೆಣೈ, ಗಣೇಶ್ ಆಚಾರ್ಯ, ಶ್ಯಾಮಲಾ ಶೆಣೈ, ಅವಿನಾಶ್ ರಾಮನಗರ, ನಿತಿನ್ ರಾಮನಗರ, ನಿಶಾಂತ್, ಯತೀಶ್ ಶೆಟ್ಟಿ ಕೂಟೇಲು, ಸಚಿನ್, ನಿತೇಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here