




ಸಂಗೀತ ಮಾನಸಿಕ ನೆಮ್ಮದಿಗೆ ಒಂದು ಉತ್ತಮ ಔಷಧ: ಶುಭ ಅಡಿಗ
ನಿಡ್ಪಳ್ಳಿ; ಬಂಟ್ವಾಳದ ಸಂಗೀತವಾಹಿನಿ ಇದರ ಐದನೇ ವರ್ಷದ ವಾರ್ಷಿಕೋತ್ಸವ ಬಂಟ್ವಾಳದ “ಸ್ಪರ್ಶ ಕಲಾ ಮಂದಿರ”ದಲ್ಲಿ ಡಿ.14ರಂದು ನಡೆಯಿತು.





ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶುಭಾ ಅಡಿಗ ಅವರು ಮಾತನಾಡಿ ಕಲೆಯನ್ನು ಕಲಿತು ಪೋಷಿಸಿದಾಗ ಮಾತ್ರ ಕಲೆಯು ಶಾಶ್ವತವಾಗಿ ಉಳಿಯಲು ಸಾಧ್ಯ.ಅದಕ್ಕಾಗಿ ಸತತ ಪರಿಶ್ರಮ ಅಗತ್ಯವಾಗಿದೆ.ಸಂಗೀತ ನಮ್ಮ ಮಾನಸಿಕ ನೆಮ್ಮದಿಗೆ ಒಂದು ಉತ್ತಮ ಔಷಧ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶುಭಾ ಶಿವಕುಮಾರ ಇವರು ಸಂಗೀತದ ಬಗ್ಗೆ ಒಲವು ಇದ್ದಾಗಲೇ ಅದನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಶಂಕರನಾರಾಯಣ ಭಟ್ ಅಸೈಗೋಳಿ ಉದ್ಘಾಟಿಸಿದರು.





ಈ ಸಂದರ್ಭದಲ್ಲಿ “ಸಂಗೀತವಾಹಿನಿ ಯುವ ಸಾಧನಾ” ಹಾಗೂ “ಕಲಾ ಪೋಷಕ” ಪ್ರಶಸ್ತಿಯನ್ನು ಸಾಧಕರಿಗೆ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶುಭಾ ಶಿವಕುಮಾರ ಇವರು ಸಂಗೀತದ ಬಗ್ಗೆ ಒಲವು ಇದ್ದಾಗಲೇ ಅದನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಗೋಪಾಲಕೃಷ್ಣ ಭಟ್ ದೈಗೋಳಿ ವೇದಿಕೆಯಲ್ಲಿದ್ದರು.
“ಸಂಗೀತವಾಹಿನಿ ಯುವ ಸಾಧನಾ ಪ್ರಶಸ್ತಿ 2025” ನ್ನು ಆತ್ರೇಯೀ ಕೃಷ್ಣಾ, ಕಾರ್ಕಳ ಹಾಗೂ “ಸಂಗೀತವಾಹಿನಿ ಕಲಾ ಪೋಷಕ ಪ್ರಶಸ್ತಿ – 2025” ಯನ್ನು ಡಾ. ಶ್ರೀಪ್ರಕಾಶ್ ಬಿ ಅವರಿಗೆ ನೀಡಿ ಗೌರವಿಸಲಾಯಿತು.
ಬಳಿಕ ಸಂಗೀತ ಕಛೇರಿ ನಡೆಯಿತು. ಹಾಡುಗಾರಿಕೆಯಲ್ಲಿ ತನ್ಮಯಿ ಉಪ್ಪಂಗಳ, ಪಿಟೀಲಿನಲ್ಲಿ ಧನಶ್ರೀ ಶಬರಾಯ ಮೃದಂಗದಲ್ಲಿ ಪವನ್ ಎಕ್ಕಡ್ಡ ಸಹಕರಿಸಿದರು.
ಬಳಿಕ ಸಂಗೀತವಾಹಿನಿ ವಿದ್ಯಾರ್ಥಿಗಳಿಂದ ಸಂಗೀತಾರಾಧನೆ ಕಾರ್ಯಕ್ರಮ ನಡೆಯಿತು. ಸಂಗೀತ ಗುರುಗಳಾದ ಡಾ.ಮಹೇಶ್ ಪದ್ಯಾಣ ಸ್ವಾಗತಿಸಿದರು. ರಮಾ ಪಿ. ಆರ್ ಕಾರ್ಯಕ್ರಮ ನಿರೂಪಿಸಿದರು. ಸುಮಂಗಲ ಮತ್ತು ಅದಿತಿ ಸಹಕರಿಸಿದರು.
ಸಂಗೀತವಾಹಿನಿ ಯುವ ಸಾಧನಾ ಪ್ರಶಸ್ತಿ 2025″ ನ್ನು ಆತ್ರೇಯೀ ಕೃಷ್ಣಾ, ಕಾರ್ಕಳ ಹಾಗೂ “ಸಂಗೀತವಾಹಿನಿ ಕಲಾ ಪೋಷಕ ಪ್ರಶಸ್ತಿ – 2025” ಯನ್ನು ಡಾ. ಶ್ರೀಪ್ರಕಾಶ್. ಬಿ ಅವರಿಗೆ ನೀಡಿ ಗೌರವಿಸಲಾಯಿತು.







