ಪುತ್ತೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ವನಿತಾ ಸಮಾಜ ಹಾರಾಡಿ ಇವರ ಪ್ರಾಯೋಜಕತ್ವದಲ್ಲಿ ಮಹಿಳಾ ಯಕ್ಷ ತಂಡ ಬಾಲವನ ಪುತ್ತೂರು ಇವರಿಂದ ‘ಶಾಂಭವಿ ವಿಳಾಸ’ ಯಕ್ಷಗಾನ ಬಯಲಾಟ ಮೊಟ್ಟೆತ್ತಡ್ಕ ಮಿಷನ್ ಮೂಲೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ರಚನಾ ಜಿದ್ಗಲ್ ಭಾಗವತರಾಗಿ, ಲಕ್ಷ್ಮೀಶ ಶಗ್ರಿತ್ತಾಯ ಪಂಜರವರು ಚೆಂಡೆಯಲ್ಲಿ, ವಿಷ್ಣು ಕಿರಣ್ ಮದ್ದಳೆಯಲ್ಲಿ ಮತ್ತು ಕೃಷ್ಣ ಚೈತನ್ಯ ಚಕ್ರತಾಳದಲ್ಲಿ ಸಹಕರಿಸಿದರು.
ದೇವೇಂದ್ರನಾಗಿ ಶೃತಿ ವಿಸ್ಮಯ್, ಅಗ್ನಿಯಾಗಿ ಜ್ಯೋತಿ ಅಶೋಕ್ ನಾಯಕ್, ವಾಯುವಾಗಿ ವರ್ಷಾ ಕೆ.ಟಿ., ಮಾಲಿನಿಯಾಗಿ ಶಾಂಭವಿ ಡಿ, ಸುಪಾಶ್ವಕನಾಗಿ ಪ್ರೇಮಾ ನೂರಿತ್ತಾಯ, ಬ್ರಹ್ಮನಾಗಿ ಪ್ರೇಮಲತಾ ರಾವ್, ವಿದ್ಯುನ್ಮಾಲಿಯಾಗಿ ಪ್ರಚೇತ್ ಶೆಟ್ಟಿ, ಯಕ್ಷನಾಗಿ ರೇಣುಕಾ ಗೌಡ ಕುಲ್ಕುಂದ, ಮಾಲಿನಿ ದೂತನಾಗಿ ಪ್ರಸಕ್ತಾ ರೈ ಸರೋಳಿ ಕೋಡಿಂಬಾಡಿ, ಮಹಿಷಾಸುರನಾಗಿ ಪ್ರೇಮಾ ಕಿಶೋರ್, ಶಂಖಾಸುರನಾಗಿ ದೀಕ್ಷಾ ಪಾರ್ವತಿ, ದುರ್ಗಾಸುರನಾಗಿ ಸಾವಿತ್ರಿ ಉಮೇಶ್, ವಿಷ್ಣುವಾಗಿ ಅನುಪಮಾ, ಈಶ್ವರನಾಗಿ ಜಯಶ್ರೀ ನಾಯಕ್, ಶ್ರೀದೇವಿಯಾಗಿ ಇಂದಿರಾ ಆಚಾರ್ ಮತ್ತು ಸಿಂಹವಾಗಿ ಪ್ರಸಕ್ತಾ ರೈ ಅಭಿನಯಿಸಿದ್ದರು. ಸಂಟ್ಯಾರಿನ ಗುರು ನರಸಿಂಹ ಕಲಾ ಆರ್ಟ್ಸ್ ವೇಷಭೂಷಣದ ವ್ಯವಸ್ಥೆ ಮಾಡಿತ್ತು.