ಹೆಬ್ಬಲಸು ಮರ ಕಡಿದ ಪ್ರಕರಣ: ವಾಹನ ಮಡಿಕೇರಿಯಲ್ಲಿ ವಶಕ್ಕೆ

0

ನೆಲ್ಯಾಡಿ: ವರ್ಷದ ಹಿಂದೆ ಅಕ್ರಮ ಹೆಬ್ಬಲಸು ಮರ ಸಾಗಾಟಕ್ಕೆ ಸಂಬಂಧಿಸಿದಂತೆ ಬಳಕೆಯಾಗಿದ್ದ ಪಿಕಪ್ ವಾಹನವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಮಡಿಕೇರಿಯಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

೨೦೨೧ರ ಆ.೧೮ರಂದು ಶಿರಾಡಿ ರಕ್ಷಿತಾರಣ್ಯದಿಂದ ೩ ಹೆಬ್ಬಲಸು ಮರ ಕಳವಾಗಿರುವ ಬಗ್ಗೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಗಳಾದ ಕೋಲ್ಪೆಯ ರಜಾಕ್, ಸಿದ್ದೀಕ್, ಷರೀ- ಎಂಬವರನ್ನು ಬಂಽಸಲಾಗಿತ್ತು. ಆದರೆ ಕೃತ್ಯಕ್ಕೆ ಬಳಸಿದ ಪಿಕಪ್ ವಾಹನ ಪತ್ತೆಯಾಗಿರಲಿಲ್ಲ, ಇದೀಗ ವಾಹನವು ಮಡಿಕೇರಿಯ ಸಿದ್ದಾಪುರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್‌ರವರ ಮಾರ್ಗದರ್ಶನದಂತೆ ಇಲಾಖೆಯ ಅಽಕಾರಿಗಳು ಸಿದ್ದಾಪುರಕ್ಕೆ ತೆರಳಿ ಅಲ್ಲಿನ ತಿತಿಮತಿ ವಲಯಾರಣ್ಯಾಽಕಾರಿ ಅಶೋಕ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಪಿಕಪ್ ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಶಿರಾಡಿ ಉಪವಲಯ ಅರಣ್ಯಾಽಕಾರಿ ಽರಜ್, ಶಿರಾಡಿ ಅರಣ್ಯ ರಕ್ಷಕ ಸುನಿಲ್ ನಾಯ್ಕ, ಕೊಕ್ಕಡ ಅರಣ್ಯ ರಕ್ಷಕ ಪ್ರಶಾಂತ್ ಮಾಳಗಿ, ರೆಖ್ಯ ಅರಣ್ಯ ರಕ್ಷಕ ನಿಂಗಪ್ಪ ಅವಾರಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here