ಅ.17: ಪುತ್ತೂರಿನಲ್ಲಿ ಹೆಲ್ತ್‌ನಿಕ್ ಹೆಲ್ತ್‌ಕೇರ್ ಶುಭಾರಂಭ

0

ಪುತ್ತೂರು: ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯ ಮಾಜಿ ಮುಖ್ಯ ವೈದ್ಯಾಧಿಕಾರಿ ಡಾ|ಹಸನ್ ಸಾಲಿ(ಬಿಎಎಂಎಸ್, ಎಂಡಿಸಿಟಿ)ಯವರ ಹೆಲ್ತ್‌ನಿಕ್ ಹೆಲ್ತ್‌ಕೇರ್ ಅ.17ರಂದು ಬಪ್ಪಳಿಗೆ ಸಮೃದ್ಧಿ ಬೈಪಾಸ್ ಸೆಂಟರ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಉಡುಪಿ-ಹಾಸನ-ಚಿಕ್ಕಮಗಳೂರು ಜಿಲ್ಲಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಶುಭಾಶೀರ್ವಚನ ನೀಡಲಿದ್ದಾರೆ.

ಶಾಸಕ ಸಂಜೀವ ಮಠಂದೂರು, ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಜನರಲ್ ಫೀಸೀಶಯನ್ ಡಾ| ಯು ಶ್ರೀಪತಿ ರಾವ್, ದ.ಕ ಜಿಲ್ಲಾ ಟಿ.ಬಿ ಆಫೀಸರ್ ಡಾ| ಬದ್ರುದ್ದೀನ್ ಎಂ.ಎನ್, ಪುತ್ತೂರು ಚೇತನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ| ಶ್ರೀಕಾಂತ್ ರಾವ್, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ ಮಹಮ್ಮದ್ ಹಾಜಿ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ಫಾ| ವಿಜಯ ಹಾರ್ವಿನ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಡಾ| ಹಸನ್ ಸಾಲಿರವರು ಪ್ರತೀ ಸೋಮವಾರದಿಂದ ಶನಿವಾರದವರೆಗೆ ಅಪರಾಹ್ನ3 ಗಂಟೆಯಿಂದ ರಾತ್ರಿ 9ಗಂಟೆಯ ವರೆಗೆ ಮತ್ತು ಆದಿತ್ಯವಾರ ಬೆಳಿಗ್ಗೆ ಗಂಟೆ 8.30ರಿಂದ ಮದ್ಯಾಹ್ನ ಗಂಟೆ 12ರ ವರೆಗೆ ವೈದ್ಯಕೀಯ ಸೇವೆಗೆ ಲಭ್ಯರಿರಲಿದ್ದಾರೆ.
ವೈದ್ಯರ ಸಂದರ್ಶನ, ವೂಂಡ್ ಡ್ರೆಸ್ಸಿಂಗ್, ಕಪ್ಪಿಂಗ್ ಥೆರಫಿ, ರಕ್ತ ಶುಗರ್ ಪರೀಕ್ಷೆ, ನೆಬುಲೈಝೇಷನ್, ಫಾರ್ಮಸಿ ಮುಂತಾದ ಸೇವೆಗಳು ಕ್ಲಿನಿಕ್‌ನಲ್ಲಿ ಲಭ್ಯವಿರಲಿದೆ ಎಂದು ಹೆಲ್ತ್‌ನಿಕ್ ಹೆಲ್ತ್‌ಕೇರ್‌ನ ಮಾಲಕರಾದ ಡಾ| ಹಸನ್ ಸಾಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here