




ಕಡಬ: ಇತ್ತಿಚ್ಚೆಗೆ ರೈಲು ಅಪಘಾತಗೊಳಗಾದ ಐತ್ತೂರು ಗ್ರಾಮದ ಓಟೆಕಜೆ ನಿವಾಸಿ ನಾಗಣ್ಣ ಗೌಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆಸ್ಪತ್ರೆಯ ವೆಚ್ಚಕ್ಕಾಗಿ ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಎರಡನೆಯ ಬಾರಿಗೆ ಧನ ಸಹಾಯ ನೀಡಿದರು.



ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ನಾಗಣ್ಣ ಗೌಡರ ಮನೆಗೆ ತೆರಳಿ ಧನ ಸಹಾಯ ನೀಡಿದರು. ಈಗಾಗಲೇ ಅಕ್ಟೋಬರ್ 13ರಂದು ಕೆ.ಪಿ.ಸಿ.ಸಿ ರಾಜ್ಯ ಸಂಯೋಜಕ ನಂದ ಕುಮಾರ್ ಅವರ ನೇತೃತ್ವದಲ್ಲಿಯೂ ಧನ ಸಹಾಯ ನೀಡಲಾಗಿತ್ತು. ಇದೀಗ ಎರಡನೆ ಬಾರಿಗೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಧನ ಸಹಾಯ ನೀಡಲಾಗಿದೆ. ಈ ಸಂದರ್ಭದಲ್ಲಿ ಬಿಳಿನೆಲೆ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷ ನಾಗೇಶ್, ಕಡಬ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರಾದ ದಿನೇಶ್ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಜತೆಗಿದ್ದರು.












