ಉಪ್ಪಿನಂಗಡಿ ಯುವವಾಹಿನಿ ಘಟಕಕ್ಕೆ 25ರ ಸಂಭ್ರಮ

0

ಉಪ್ಪಿನಂಗಡಿ : ಯುವವಾಹಿನಿ ಉಪ್ಪಿನಂಗಡಿ ಘಟಕವು 25 ಸಂವತ್ಸರಗಳನ್ನು ಪೂರೈಸಿದ ಸವಿನೆನಪಿಗಾಗಿ ಘಟಕದ ಮಾಜಿ ಅಧ್ಯಕ್ಷರುಗಳ ಮನೆ ಭೇಟಿಯ ಭಾಗವಾಗಿ ಭಜನೆ ಮತ್ತು ಗುರುಸ್ಮರಣೆ ಕಾರ್ಯಕ್ರಮದ 12ನೇ ಕಾರ್ಯಕ್ರಮವು ಅ.16ರಂದು ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ 2020-2021ರ ಅವಧಿಯ ಅಧ್ಯಕ್ಷರಾಗಿ ಮುನ್ನಡೆಸಿದ  ಚಂದ್ರಶೇಖರ ಸನೀಲ್ ಇವರ ಬೆಳ್ಳಿಪ್ಪಾಡಿಯ ಮನೆ ‘ಯಮುನಾ’ದಲ್ಲಿ ಆಚರಿಸಿದರು.
ಭಜನಾ ಕಾರ್ಯಕ್ರಮ ಮುಗಿದ ತರುವಾಯ ಗುರು ಸ್ಮರಣೆ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಘಟಕದ ಮಾಜಿ ಅಧ್ಯಕ್ಷ ಡಾ. ರಾಜರಾಮ್ ಕೆ.ಬಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಘಟಕವನ್ನು ತಮ್ಮ ಅಧ್ಯಕ್ಷಾವಧಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಚಂದ್ರಶೇಖರ ಸನೀಲ್ ರೂಪಲತಾ ದಂಪತಿಗಳನ್ನು ಮತ್ತು ಮಕ್ಕಳಾದ ರಿಶಿತಾ ಮತ್ತು ಧೃಣಿತಾ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡುವುದರ ಮೂಲಕ ಗೌರವಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ ಸನೀಲ್  ತಮ್ಮ ಅಧ್ಯಕ್ಷಾವಧಿಯಲ್ಲಿ ಘಟಕವನ್ನು ಅತ್ಯುತ್ತಮ ಮಟ್ಟದಲ್ಲಿ ನಡೆಸಲು ಸಹಕರಿಸಿದ ಸರ್ವರ ಸಹಕಾರವನ್ನು ಮತ್ತೊಮ್ಮೆ ನೆನಪಿಸಿದರು.

ಕಾರ್ಯಕ್ರಮದಲ್ಲಿ ದ.ಕನ್ನಡ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರಾದ ಶಯನಾ ಜಯಾನಂದ್ ಮಾತನಾಡಿ ಯುವವಾಹಿನಿ ಉಪ್ಪಿನಂಗಡಿ ಘಟಕದ ಸಮಾಜಮುಖಿ ಕಾರ್ಯಕ್ರಮಗಳಿಗೆ ಶುಭಹಾರೈಸಿದರು.

ಘಟಕದ ಗೌರವ ಸಲಹೆಗಾರರಾದ ವರದರಾಜ್ ಎಂ, ಘಟಕದ ಅಧ್ಯಕ್ಷರಾದ ಕುಶಾಲಪ್ಪ ಹತ್ತು ಕಳಸೆ, ಸಮಾಜದ ಮುಖಂಡ ಜಯಾನಂದ್, ಮಾಜಿ ಅಧ್ಯಕ್ಷರುಗಳಾದ ಗುಣಕರ್ ಮುಗ್ಗಗುತ್ತು, ಜಯವಿಕ್ರಂ ಕಲ್ಲಾಪು, ಅಜಿತ್ ಕುಮಾರ್ ಪಾಲೇರಿ, ಕೃಷ್ಣಪ್ಪ ಪೂಜಾರಿ, ಅಶೋಕ್ ಕುಮಾರ್ ಪಡ್ಪು, ಆಶಿತ್ ಎಂ.ವಿ, ಗುಣಕರ್ ಅಗ್ನಾಡಿ ,ಡೀಕಯ್ಯ ಗೌಂಡತ್ತಿಗೆ ಹಿರಿಯರಾದ ಬೊಮ್ಮಯ್ಯ ಬಂಗೇರ ,ವೀರಪ್ಪ ಪೂಜಾರಿ ಡೆಕ್ಕಾಜೆ, ರೇವತಿ ವೀರಪ್ಪ ಪೂಜಾರಿ, ಘಟಕದ ಪ್ರಥಮ ಉಪಾಧ್ಯಕ್ಷರಾದ ಮನೋಹರ್ ಕುಮಾರ್ ಆಟಲ್, ಜೊತೆ ಕಾರ್ಯದರ್ಶಿ ಶ ಅನಿತಾ ಹರೀಶ್, ಕೋಶಾಧಿಕಾರಿ ಸುರೇಶ್ ಹಲೇಜಿ, ಪದಾಧಿಕಾರಿಗಳು ಉಮೇಶ್ ಡೆಕ್ಕಾಜೆ, ಅಂಕಿತ್ ಪೂಜಾರಿ, ನಾಣ್ಯಪ್ಪ ಕೋಟ್ಯಾನ್, ಮನೋಹರ್ ಕೆಳಗಿನಮನೆ, ಮಾಧವ ಪೂಜಾರಿ, ಬಿಲ್ಲವ ಗ್ರಾಮ ಸಮಿತಿ ಬೆಳ್ಳಿಪಾಡಿಯ ಅಧ್ಯಕ್ಷ ವಸಂತ್ ಪೂಜಾರಿ, ಘಟಕದ ಸದಸ್ಯರಾದ ರಮ್ಯಾ ರಾಜರಾಮ್, ಶ್ವೇತಾ ಆಶಿತ್, ಸಂದೇಶ್ ಪೂಜಾರಿ, ತನಿಯಪ್ಪ ಪೂಜಾರಿ ಹೊಸಮನೆ, ಗಂಗಾಧರ್ ಪುರಿಯ, ಕು. ವರ್ಷ,ಹರ್ಷಿತಾ,ಶ್ರೀ ಲಕ್ಷ್ಮೀ ,ಅಕ್ರತಿ, ಬೇಬಿ ಸಾನಿಧ್ಯ, ಬೇಬಿ ದ್ರುವಿ, ಧ್ರುವ, ಕೃತಿಕ್,ವಿಕಾಸ್ ಕೆಳಗಿನಮನೆ , ಸಂತೋಷ್ ಕೆಳಗಿನಮನೆ , ಮಧುಕರ ಕೆಳಗಿನಮನೆ,ಚೇತನ್ ಪೊಲ್ಲಕೋಡಿ ಹಾಗೂ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ ಸ್ವಾಗತಿಸಿ, ಉಪಾಧ್ಯಕ್ಷ ಮನೋಜ್ ಸಾಲಿಯಾನ್ ಧನ್ಯವಾದ ಸಲ್ಲಿಸಿ, ಘಟಕದ ಮಾಜಿ ಅಧ್ಯಕ್ಷಅಶೋಕ್ ಕುಮಾರ್ ಪಡ್ಪು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here