ಸಾಮರಸ್ಯದ ಸಂಕೇತವಾಗಿ ತುಡರ್ ಕಾರ್ಯಕ್ರಮಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಚಾಲನೆ

0

ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿ ವಿಧಿ ವಿಭಾಗದ ಆಶಯದಂತೆ ಪುತ್ತೂರು ನಗರ ಪ್ರದೇಶದ ಆರು ಸೇವಾ ಬಸ್ತಿ ಕಾಲೋನಿಗಳಿಗೆ ದೀಪಾವಳಿ ಹಬ್ಬದ ಬೆಳಕು ನೀಡುವ ಕಾರ್ಯಕ್ರಮಕ್ಕೆ ಅ.24ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ದೇವಳದ ನಂದಾ ದೀಪದಿಂದ ಬೆಳಗಿಸಲ್ಪಟ್ಟ ದೀಪಗಳನ್ನು ಸೇವಾ ಬಸ್ತಿಯ ಪ್ರಮುಖರಿಗೆ ದೇವಳದ ಪ್ರಧಾನ ಅರ್ಚಕರು ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಿ.ಎಸ್ ಭಟ್ ಅವರು ಪ್ರದಾನ ಮಾಡಿದರು. ದೀಪದ ಬೆಳಕನ್ನು ಪಡೆದ ಪ್ರಮುಖರು ಭಜನೆ ಮೂಲಕ ತಮ್ಮ ತಮ್ಮ ಕಾಲೋನಿಗಳಿಗೆ ತೆರಳಿ ಪ್ರತಿ ಮನೆಯ ದೀಪಗಳನ್ನು ಬೆಳಗಿಸುವ ಕಾರ್ಯಕ್ರಮ ನಡೆಯಿತು. ಪುತ್ತೂರು ನಗರ ಪ್ರದೇಶದಲ್ಲಿ ಉರ್ಲಾಂಡಿ ಬಪ್ಪಳಿಗೆ, ಕಲ್ಲೇಗ ಶೇವಿರೆ, ಬ್ರಹ್ಮನಗರ, ಬನ್ನೂರು ಕರ್ಮಲ, ತೆಂಕಿಲ, ಆನೆಮಜಲು ಕಡೆಗಳಿಗೆ ಪ್ರತ್ಯೇಕ ತಂಡವಾಗಿ ತೆರಳಿ ಅಲ್ಲಿ ಕಾರ್ಯಕ್ರಮ ನಡೆಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಸುಧಾ ಎಸ್ ರಾವ್, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ಬಿ.ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ಬಿ.ಕೆ.ವೀಣಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ತಿಪ್ಪೆ ಸ್ವಾಮಿ, ಡಾ. ದಯಾಕರ್ ಸುಳ್ಯ, ಪ್ರವೀಣ್ ಸರಳಾಯ, ಬಂಗಾರಡ್ಕ ವಿಶ್ವೇಶ್ವರ ಭಟ್, ಸುಬ್ರಾಯಪುಣಚ, ಡಾ.ಕೃಷ್ಣಪ್ರಸನ್ನ, ಮೂಲಚಂದ್ರ, ಡಾ.ಎಂ.ಕೆ.ಪ್ರಸಾದ್, ತಿರುಮಲೇಶ್ವರ ಭಟ್, ರವೀಂದ್ರ ಪಿ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕಲ್ಲೇಗ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಸಂತೋಷ್ ಬೋನಂತಾಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here