ನಿಡ್ಪಳ್ಳಿ; ಶ್ರೀ ಕಿನ್ನಿಮಾಣಿ ಪೂಮಾಣಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಹುಲಿ ಭೂತಕ್ಕೆ ಪುದ್ವಾರ್ ಮೆಚ್ಚಿ ನೆಮೋತ್ಸವ ಅ.27 ರಂದು ಬೆಳಿಗ್ಗೆ ಗಂಟೆ 10 ರಿಂದ ಗುತ್ತು ಚಾವಡಿಯಲ್ಲಿ ನಡೆಯಲಿದೆ.
ಕಾರ್ಯಕ್ರಮಗಳು-
ಅ.26 ರಂದು ಬೆಳಿಗ್ಗೆ ಗಂಟೆ 9 ಕ್ಕೆ ಕ್ಷೇತ್ರದ ತಂತ್ರಿಗಳಾದ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಗುತ್ತು ಚಾವಡಿಯಲ್ಲಿ ಕದಿರು ತುಂಬಿಸುವುದು.ಗಂಟೆ 9.30 ಕ್ಕೆ ದೈವಗಳ ಶುದ್ದಿ ಕಲಶ ನಂತರ ದೀಪಾವಳಿ ಪ್ರಯುಕ್ತ ದೈವಗಳಿಗೆ ತಂಬಿಲ. ಮಧ್ಯಾಹ್ನ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಗಂಟೆ 2 ಕ್ಕೆ ಪಲ್ಲಕ್ಕಿ ಸಹಿತ ಗುತ್ತು ಚಾವಡಿಯಿಂದ ದೈವಗಳ ಭಂಡಾರ ಹೊರಟು ಮುಂಡೂರು ಸಣ್ಣ ಉಳ್ಳಾಕುಲು ಚಾವಡಿಯಲ್ಲಿ ತಂಬಿಲ ಸೇವೆ.ನಂತರ ಉಳ್ಳಾಕುಲು ಮಾಡಕ್ಕೆ ದೈವಗಳ ಭಂಡಾರ ಬಂದು ಗಂಟೆ 4 ಕ್ಕೆ ತಂಬಿಲ ಸೇವೆ ನಡೆಯಲಿದೆ.
ರಾತ್ರಿ ಗಂಟೆ 8 ಕ್ಕೆ ಬಲೀಂದ್ರ ಪೂಜೆ ನಂತರ ಅನ್ನಸಂತರ್ಪಣೆ.ರಾತ್ರಿ ಗಂಟೆ 10 ಕ್ಕೆ ಗುತ್ತು ಚಾವಡಿಯಲ್ಲಿ ಹುಲಿಭೂತದ ಭಂಡಾರ ತೆಗೆಯುವುದು.ನಂತರ ಮುಂಡೂರು ಸಣ್ಣ ಉಳ್ಳಾಕುಲು ದೈವಸ್ಥಾನದಲ್ಲಿ ತಂಬಿಲ ಸೇವೆ.
ಅ.27 ರಂದು: ಬೆಳಿಗ್ಗೆ ಗಂಟೆ 10 ರಿಂದ ಗುತ್ತು ಚಾವಡಿಯಲ್ಲಿ ಹುಲಿಭೂತಕ್ಕೆ ಪುದ್ವಾರ್ ಮೆಚ್ಚಿ ನೇಮೋತ್ಸವ. ಮಧ್ಯಾಹ್ನ ದೈವದ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ ಎನ್.ಆರಿಗ ತಿಳಿಸಿದ್ದಾರೆ.