ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೀಪಾವಳಿ ಉತ್ಸವ

0

ಆಲಂಕಾರು: ಸೀಮಾ ದೇವಸ್ಥಾನವಾದ ಶರವೂರು ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ದೀಪಾವಳಿ ಉತ್ಸವ ಅ.24 ರಂದು ನಡೆಯಿತು.

ರಾತ್ರಿ ಶ್ರೀ ದೇವಿಗೆ ಮತ್ತು ಮಹಾಗಣಪತಿಗೆ ದೊಡ್ಡರಂಗಪೂಜೆ ನಡೆದ ಬಳಿಕ ಬಲಿ, ಉತ್ಸವ, ಬಲೀಂದ್ರ ಪೂಜೆ ಜರುಗಿತು. ಆ ಬಳಿಕ ಬಟ್ಟಲು ಕಾಣಿಕೆ, ಮಹಾಪೂಜೆ ನಂತರ ಪ್ರಸಾದ ವಿತರಣೆ ನಡೆಯಿತು.ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆಯೂ ಮಾಡಲಾಗಿತ್ತು.ಈ ಸಂಧರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಹಾಗು ಸದಸ್ಯರು ಹಾಗು ಭಕ್ತಾಧಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here