





ಪುತ್ತೂರು : ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನ. 1 ರಂದು ಬೆಳಿಗ್ಗೆ 9.30 ರಿಂದ ಪಂಚಮಿ ಮತ್ತು ಷಷ್ಠಿ ಜಾತ್ರೋತ್ಸವದ ಬಗ್ಗೆ ಪೂರ್ವಭಾವಿ ಸಭೆ ಜರಗಲಿದ್ದು, ಸಭೆಯಲ್ಲಿ ಆಡಳಿತ ಸಮಿತಿ, ಅನುವಂಶಿಯ ಮೊಕ್ತೇಸರರು, ಖಾಯಂ ಅಹ್ವಾನಿತರು ಹಾಗೂ ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆ ನೀಡುವಂತೆ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ತಿಳಿಸಿದ್ದಾರೆ.











