ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯೊಂದಿಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ : ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು:  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಇವರ ವತಿಯಿಂದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆ, ರಾಮಕುಂಜ ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ “ಪ್ರತಿಭಾ ಕಾರಂಜಿ”ಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಸಾನ್ವಿ ಕಜೆ (ಡಾ. ಚರಣ್ ಕಜೆ, ಡಾ.ರಮ್ಯಾ ಕಜೆ ದಂಪತಿ ಪುತ್ರಿ) ಗಝಲ್ ನಲ್ಲಿ ಪ್ರಥಮ, 10ನೇ ತರಗತಿಯ ಶರಣ್ (ಸೀತಾರಾಮ ರೈ, ಸವಿತಾ ರೈ ದಂಪತಿ ಪುತ್ರ) ಹಾಸ್ಯದಲ್ಲಿ ದ್ವಿತೀಯ, 10ನೇ ತರಗತಿಯ ಧನುಷ್ ರಾಮ್(ದಿನೇಶ್ ಪ್ರಸನ್ನ , ಉಮಾ.ಡಿ. ಪ್ರಸನ್ನ ದಂಪತಿ ಪುತ್ರ) ಮತ್ತು ಹಿಮಾನಿ (ಚಿದಾನಂದ, ಶೋಭಾ ದಂಪತಿ ಪುತ್ರಿ) ಇವರ ತಂಡ ರಸಪ್ರಶ್ನೆಯಲ್ಲಿ ದ್ವಿತೀಯ, 9ನೇ ತರಗತಿಯ ಅಮೋಘಕೃಷ್ಣ (ಬಾಲಕೃಷ್ಣ ಭಟ್, ಸುಮಿತ್ರಾ ಭಟ್ ದಂಪತಿ ಪುತ್ರ) ಜನಪದಗೀತೆಯಲ್ಲಿ ಪ್ರಥಮ,
10ನೇ ತರಗತಿಯ ಅರ್ಚನಾ ಕಿಣಿ (ಹರೀಶ್ ಕಿಣಿ, ವಿನಯಾ ಕಿಣಿ ದಂಪತಿ ಪುತ್ರಿ) ಸಂಸ್ಕೃತ ಭಾಷಣದಲ್ಲಿ ಪ್ರಥಮ, 10ನೇ ತರಗತಿಯ ತೇಜ ಚಿನ್ಮಯ ಹೊಳ್ಳ (ಹರೀಶ್ ಹೊಳ್ಳ, ಸುಚಿತ್ರಾ ಹೊಳ್ಳ ದಂಪತಿ ಪುತ್ರ)ಭಾವಗೀತೆಯಲ್ಲಿ ಪ್ರಥಮ, 10ನೇ ತರಗತಿಯ ಧಾತ್ರಿ (ದಿನೇಶ್, ಪದ್ಮಲಕ್ಷ್ಮೀ ದಂಪತಿ ಪುತ್ರಿ) ಸಾಮಾನ್ಯ ಕನ್ನಡ ಭಾಷಣದಲ್ಲಿ ತೃತೀಯ ಬಹುಮಾನ ಪಡೆದುಕೊಂಡು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ.

ಮಾತ್ರವಲ್ಲದೆ, ಶಾಲಾ ತಂಡ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ..

LEAVE A REPLY

Please enter your comment!
Please enter your name here