ಆಲಂಕಾರು: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನ.11ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ಅನಾವರಣ ಮಾಡಲಿದ್ದು ಇದರ ಅಂಗವಾಗಿ ಹಮ್ಮಿಕೊಂಡಿರುವ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ಕೆಂಪೇಗೌಡ ರಥಕ್ಕೆ ಅ.30ರಂದು ರಾಮಕುಂಜ ಗ್ರಾ.ಪಂ.ನಲ್ಲಿ ಸ್ವಾಗತ ಕೋರಿದರು.
ರಾಮಕುಂಜ ಹಾಗು ಕೊಯಿಲ ಗ್ರಾಮ ಪಂಚಾಯಿತಿ ವತಿಯಿಂದ ಸ್ವಾಗತ ಕೋರಲಾಯಿತು. ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ರಥವನ್ನು ಬರಮಾಡಿಕೊಂಡರು.ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖಾಧಿಕಾರಿ ಸಜೀಕುಮಾರ್,ಕಡಬ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ,ಕಡಬ ಉಪತಹಶೀಲ್ದಾರ್ ಗೋಪಾಲಕೃಷ್ಣ,ರಾಮಕುಂಜ ಗ್ರಾ.ಪಂ ಅಧ್ಯಕ್ಷ ಮಾಲತಿ,ಕೊಯಿಲ ಗ್ರಾ.ಪಂ ಅಧ್ಯಕ್ಷ ಹರ್ಷಿತ್ ,ಆಲಂಕಾರು ಸಿ.ಎ ಬ್ಯಾಂಕ್ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಪ್ರಮುಖರಾದ ಸದಾಶಿವ ಶೆಟ್ಟಿ ಮಾರಂಗ ,ಲಕ್ಷ್ಮೀ ನಾರಾಯಣ ರಾವ್ ಅತೂರು,ಕಡಬ ತಾ.ಪಂ ಮಾಜಿ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ತಾ.ಪಂ ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ ಸೇರಿದಂತೆ ರಾಮಕುಂಜ,ಕೊಯಿಲ ಗ್ರಾ.ಪಂ ಉಪಾದ್ಯಕ್ಷರು,ಸದಸ್ಯರು,ವಿವಿಧ ಸಂಘ ಸಂಸ್ಥೆಯ ಪದಾದಿಕಾರಿಗಳು ಗ್ರಾಮಸ್ಥರು,ಕಂದಾಯ ಇಲಾಖೆಯವರು,ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾಮಕುಂಜ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜೆರಾಲ್ಡ್ ಮಸ್ಕರೇನ್ಹಸ್ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು,ಆನಂತರ ಗಣೇಶನಗರದಲ್ಲಿ ಆಲಂಕಾರು ಸಿ.ಎ ಬ್ಯಾಂಕ್ ನ ಕೊಯಿಲ ಶಾಖೆಯ ಮುಂಭಾಗದಲ್ಲಿ ಕೆಂಪೇ ಗೌಡ ರಥದಲ್ಲಿದ್ದ ಎಲ್.ಐ.ಡಿ ಪರದೆಯ ಮೂಲಕ ಪ್ರತಿಮೆ ಅನಾವರಣದ ಕಿರು ಚಿತ್ರ ಪ್ರದರ್ಶಿಸಿ ಆಲಂಕಾರಿನತ್ತ ರಥ ಪ್ರಯಾಣ ನಡೆಸಿತು.