ಹಾರ್ಡ್‌ವೇರ್ ಸಾಮಾಗ್ರಿಗಳ ಮಳಿಗೆ ನಾಗೇಶ್ ಟ್ರೇಡರ್‍ಸ್‌ನಲ್ಲಿ ಲಕ್ಷ್ಮೀಪೂಜೆ

0

ಪುತ್ತೂರು: ಅರುಣಾ ಚಿತ್ರಮಂದಿರದ ಬಳಿ  ಸ್ವಾಗತ ಹೋಟೇಲ್ ಹಿಂಬದಿ ಇರುವ ನಾಗೇಶ್ ಟ್ರೇಡರ್‍ಸ್‌ನಲ್ಲಿ ಸಂಸ್ಥೆಯ 38ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಲಕ್ಷ್ಮೀ ಪೂಜೆ ಅ.26ರಂದು ನಡೆಯಿತು. ಅರ್ಚಕ ತ್ರಿವಿಕ್ರಮ ಭಟ್ ಲಕ್ಷ್ಮೀಪೂಜೆ ನೆರವೇರಿಸಿದರು.

ಕಾಮತ್ ಗೋಲ್ಡ್‌ನ ವೆಂಕಟ್ರಾಯ ಕಾಮತ್, ಜೆಮಿನಿ ಟೆಕ್ನಿಕಲ್ಸ್ ನ ಮಾಲಕ ಸತೀಶ್ ರಾವ್, ಎಲ್‌ಐಸಿ ಏಜೆಂಟ್ ಸುನಿಲ್ ಕಾಮತ್, ರತ್ನಾಕರ ಭಟ್ ಸೇರಿದಂತೆ ಹಲವು ಗಣ್ಯರು, ಗ್ರಾಹಕರು ಹಾಗೂ ಹಿತೈಷಿಗಳು ಆಗಮಿಸಿ ಶುಭಹಾರೈಸಿದರು. ಮಾಲಕರಾದ ವಿವೇಕಾನಂದ ನಾಯಕ್ ಎನ್ ಮತ್ತು  ವಿನುತ ನಾಯಕ್ ಅತಿಥಿಗಳನ್ನು ಸ್ವಾಗತಿಸಿ ,ವಂದಿಸಿದರು. ವಿಶ್ವಾಸ್ ನಾಯಕ್ ಮತ್ತು ವಿನಾಯಕ್ ನಾಯಕ್ ಸಹಕರಿಸಿದರು.

LEAVE A REPLY

Please enter your comment!
Please enter your name here