




ವಿಟ್ಲ: ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.3ರಿಂದ ಜ.8ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನ.3ರಂದು ಚಪ್ಪರ ಮುಹೂರ್ತ ನಡೆಯಿತು.








ಕ್ಷೇತ್ರದ ಅರ್ಚಕರಾದ ವೇ.ವೂ. ಗೋಪಾಲಕೃಷ್ಣ ರವರು ವಿಧಿವಿಧಾನ ನೆರವೇರಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್. ಮುಕ್ಕುಡ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಎಂ.ಹೆಚ್.ರಮೇಶ್ ಭಟ್ ಭಂಡಾರಮನೆ, ಸೂರ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಈಶ್ವರ ಗೌಡ ನಾಯಿತೊಟ್ಟು, ಗ್ರಾಮಸ್ಥರಾದ ಜಯಂತ ಕೋಲ್ಪೆ, ವೆಂಕಟರಮಣ ಭಟ್ ಸೂರ್ಯ, ಪದ್ಮನಾಭ ಕೊಡೆಂಚೆರೆಪಾಲು, ವಿಜಯ ಸೂರ್ಯ, ಯತೀಶ್, ಪುರಂದರ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು.









