ಪುತ್ತೂರು : ಹೆಸರಾಂತ ಕಂಪೆನಿಯ, ಅತ್ಯುತ್ತಮ ಗುಣಮಟ್ಟ ಹಾಗೂ ದೀರ್ಘ ಬಾಳ್ವಿಕೆ ಹೊಂದಿರುವಂಥ ಮನೆ, ಕಟ್ಟಡಗಳ ಅಲಂಕಾರಿಕ ಕೆಲಸಗಳಲ್ಲಿ ಪ್ರಮುಖವಾಗಿ ಉಪಯೋಗಿಸಲ್ಪಡುವ ಗ್ಲಾಸ್, ಪ್ಲೈವುಡ್ ಹಾಗೂ ಹಾರ್ಡ್ವೇರ್ ಜೊತೆಗೆ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಇವನ್ನೆಲ್ಲಾ ಒಂದೇ ಸೂರಿನಡಿ ಒಳಗೊಂಡಿರುವಂಥ ಪುರುಷೋತ್ತಮ ರೆಂಜಾಳರವರ ಮಾಲಕತ್ವದ ವಿನೂತನ ಮಳಿಗೆ ಶ್ರೀ ಕೃಷ್ಣ ಹಾರ್ಡ್ವೇರ್ ನ.4 ರಂದು ಪಡೀಲು ಮುಖ್ಯರಸ್ತೆ, ಎನ್ .ಎಸ್ ಆರ್ಕೇಡ್ ಮಹಡಿಯಲ್ಲಿ ಶುಭಾರಂಭಗೊಂಡಿತು. ಪುರೋಹಿತ ಹರಿಪ್ರಸಾದ್ ಮುರ ಬಳಗ ಧಾರ್ಮಿಕ ಕೈಕಂರ್ಯ ನೆರವೇರಿಸುವ ಮೂಲಕ ನೂತನ ಮಳಿಗೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು.
ಮಾಲಕರ ಮಾವ ನಾರಾಯಣ ಕುಲಾಲ್ ಸೇಡಿಯಾಪು, ಹರೀಶ್ ಕಿಲಿಂಗಾರ್, ಹರ್ಷಿತ್ ಕರ್ತಿಮಾರ್, ದಿಕ್ಷೀತ್ ಪಳ್ಳ, ಪ್ರಜ್ವಲ್ ರೈ ಬನ್ನೂರು, ಪಡೀಲ್ ಗ್ರೀವ್ಸ್ ಅಂಪೆರ್ ಇ.ವಿ. ಮಳಿಗೆ ಮಾಲಕ ಪ್ರಕಾಶ್, ಎನ್.ಎಸ್ ಸಂಕೀರ್ಣ ಪಾಲುದಾರರಾದ ರಾಜೇಶ್ ಮತ್ತು ಸಂತೋಷ್, ಬೊಳ್ವಾರ್ ವಿನಾಯಕ ಟ್ರೇಡರ್ಸ್ ಮಾಲಕ ನವೀನ್ ಶೆಟ್ಟಿ ಹಾಗೂ ಪ್ರಣವ ಸೌಹಾರ್ದ ಸಹಕಾರಿಯ ಸಿ.ಇ.ಓ. ಲೊಕೇಶ್ ಸಹಿತ ಹಲವು ಅತಿಥಿಗಳು ಆಗಮಿಸಿ ಹಾರೈಸಿದರು.
ಮಾಲಕ ಪುರುಷೋತ್ತಮ ಆರ್ ಮಾತನಾಡಿ, ಪ್ರಸಿದ್ಧ ಕಂಪೆನಿಗಳ ಗ್ಲಾಸ್ ಉತ್ಪನ್ನಗಳು, ದೀರ್ಘ ಬಾಳ್ವಿಕೆಯ ಪ್ಲೈವುಡ್ ಸಾಮಗ್ರಿಗಳು, ಹಾರ್ಡ್ವೇರ್ ಉತ್ಪನ್ನಗಳು ಜೊತೆಗೆ ಬಲು ಅಂದವಾಗಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸವನ್ನೂ ಕೂಡ ನಿಗದಿತ ಸಮಯಕ್ಕೆ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾಡಿಕೊಡಲಾಗುವುದೆಂದು ತಿಳಿಸಿ, ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.
ಹರಿಣಾಕ್ಷಿ ಪುರುಷೋತ್ತಮ್ ರೆಂಜಾಳ, ಬೇಬಿ ಹರ್ಷಿತಾ ರೆಂಜಾಳ ಸ್ವಾಗತಿಸಿ, ವಂದಿಸಿದರು.